ಕಾವ್ಯ ಸಂಗಾತಿ
ರಜಿಯಾ .ಕೆ ಭಾವಿಕಟ್ಟಿ
‘ಹಕ್ಕಿ ಹಾಡು’
ಬಾನಿನಲ್ಲಿ ಜಿಕುತಿತ್ತು
ಚಂದದೊಂದು ಹಕ್ಕಿಯು
ಹಾಡಿ ಕುಣಿದು ನಲಿದು ಜಿಗಿದು
ಕಲರವದಿ ಹಾಡಿತಲಿ.
ಮೇಲೆ ಕೆಳಗೆ ಹಾರಿ ಹಾರಿ
ರೆಕ್ಕೆಗಳ ಆಸರದಿ ಆಗಸದ
ಏಣಿಯಲಿ ತೇಲಿ ಬರೋ ಗಾಳಿಯಲಿ
ಚಿಟರ್ ಪುಟರ್ ಸದ್ದಿನಲಿ
ಭೂಮಿ ತುಂಬ ಹಸಿರು ಹಸಿರು
ಮೇಲೆ ನೋಡಿ ರವಿಯ ಉಸಿರು
ಖುಷಿಯು ಜಗಕೆ ಮನದಬಯಕೆ
ತೋರಿಸಲದು ಕುಣಿಯುವುದು
ಎಂತಾ ಸೊಗಸು ಸೊಬಗು ಇದು
ನೋಡಲದುವೆ ರಾಣಿಯು
ಸುಂದರದ ಜಗದಲಿ ಅದರ ಹೊರತು
ಖುಷಿಯ ಪಡುವ ಬೇರೆ ರೂಪ
ಕಾಣೆನೆನಲು
ತೇಲು ಮೋಡ ಮುಸುಕಿ ಬಂತು
ಕಪ್ಪು ಛಾಯೆ ಹೊತ್ತು ತಂತು
ಘೋರ ವ್ಯಾಘ್ರನಂತೆ ಸಿಡಲು
ದೊಪ್ಪನೆ ಬಡಿಯಿತು
ಮಿಂಚಿನ ಬೆಳಕು ಚಂದ್ರನೆಂದು
ಅಪ್ಪಿಕೊಳ್ಳಲು ಹೋಯಿತು
ಸಿಡಿಲು ಬಡಿದ ಹೊಡೆತಕದರ
ಹೃದಯ ಒಡೆದು ಹೋಯಿತು.
ನೋವು ತಾಳಲಾರದೆ ಹಕ್ಕಿ
ಮೇಲಿನಿಂದ ಬಿದ್ದು ಕೆಳಗೆ
ತನ್ನ ಪ್ರಾಣ ಬಿಟ್ಟಿತು.
ಋಷಿಯು ಅದರ ಪಾಲಿಗೆ
ಕೊನೆಗೂ ಇಲ್ಲವಾಯಿತು.
ರಜಿಯಾ .ಕೆ ಭಾವಿಕಟ್ಟಿ