ಕಾವ್ಯ ಸಂಗಾತಿ
ಡಾ. ಯಲ್ಲಮ್ಮ ಕೆ
ಬದುಕು
ನಡುಹಾದಿ
ಬೀದಿಯ
ಬಳ್ಳಿಯಲೊಂದು
ಹೂ – ನಗೆಯ
ಬೀರಿತ್ತು,
ಕಂಪು ಸೂಸಿತ್ತು;
ನಾರಿನ ಸಂಗದಿ
ಭವ- ಬಂಧನಕೆ ತಾ
ಸಿಲುಕಿ, ದೇವರ
ಗುಡಿಯಲೋ..,
ನೀರೆಯ
ಮುಡಿಯಲೋ…
ಸಿದಿಗೆ ಮೇಲಿನ
ಹೆಣದೆದ್ಮಲೋ..,
ಹೂ- ನಗೆಯ
ಬೀರಿ,
ಕಂಪು ಸೂಸಿ,
ಉಸಿರು- ಚೆಲ್ಲಿತ್ತು ;
ಕುರುಹ అళిసి,
ತನ್ನಿರವ ಮರೆಸಿ,
ಬದುಕಿನ ಸಾರ್ಥಕ್ಯ
ಮೆರೆದಿತ್ತು.
–ಡಾ. ಯಲ್ಲಮ್ಮ ಕೆ