ಮಾಲಾ ಹೆಗಡೆ ಅವರ ಕವಿತೆ-ಕ್ರಾಂತಿ

ನಮ್ಮದಲ್ಲದರ ಜೊತೆ ಗುದ್ದಾಟ
ಸಲ್ಲದು,
ನಮ್ಮದೆನ್ನುವ ತನವ
ತೊರೆಯಲೂ ಬಾರದು.

ಶಾಂತಿಯ ಮಂದ ಪ್ರಭೆ
ತಾಕದಿರೋ ಕಾರ್ಗತ್ತಲಲಿ,
ಕ್ರಾಂತಿಯ ಕಾಂತಿಯೇ
ಮುನ್ನಡೆಸೋ ಶಕ್ತಿಯಾಗಲಿ.

ಕಠೋರ ಮುಳ್ಳಿನ
ನಡುವೆಯೂ ತಾನು
ಮೃದುತ್ವ ತಳೆದೇ ಗುಲಾಬಿ
ಅರಳುವುದು.

ಕಠಿಣ ಹೋರಾಟದ
ಫಲವಾಗಿಯೇ ನಾವು
ದಾಸ್ಯತ್ವದ ಮುಷ್ಠಿಯಿಂದ
ಸ್ವತಂತ್ರರಾಗಿಹೆವು.

ಘೋರವೆನಿಸಿದರು ಈ
ಕ್ರಾಂತಿಯ ಮುಖವು,
ಪರಿವರ್ತನೆಯೆಡೆಗಿನ ನವ
ಭಾಷ್ಯವು.


Leave a Reply

Back To Top