ಗಾಯತ್ರಿ ಎಸ್ ಕೆ ಕವಿತೆ- ನಾವು ಭಾರತಿಯರು

ನಮ್ಮ ದೇಶ ಭಾರತ ನಾವು
ಭಾರತೀಯರು
ಎಲ್ಲ ಪ್ರೀತಿ ನಮ್ಮಲಿ ಸ್ನೇಹ
ಹಸ್ತ ನಾವುಗಳು..!!

ಪ್ರೀತಿಯೊಂದೇ ಭಾವವೊಂದೆ
ನಮ್ಮಲಿ
ಐಕ್ಯತೆಯ ಸಾರುವೆವು
ಒಗ್ಗಟ್ಟಿನಲಿ..!!

ಹೆದರದೆ ಬೆದರದೆ ಹೋರಾಟ
ನಮ್ಮದು
ನಾವೆಲ್ಲ ಒಂದೇ ಉಸಿರು
ಪ್ರಾಣ ನಮ್ಮದು..!!

ನಮ್ಮಲ್ಲಿ ಎಲ್ಲ ಇದೆ ಪ್ರೀತಿಕರುಣೆ
ತಾಳ್ಮೆ ಭಕ್ತಿ
ಬಾಳು ಚಂದ ಬುನಾದಿ ಅಂದ
ವಿಶ್ವಾಸವು..!!

ಭರವಸೆಯು ನಮ್ಮದು
ಜಯಿಸುವ ಕೀರ್ತಿಯದು
ಒಗ್ಗಟ್ಟಿನಲಿ ಶಿಖರ
ತಾಳ್ಮೆಯು ಅಖರ..!!

ಹಸಿರ ವನಸಿರಿಯ ನಾಡು
ಎಲ್ಲೆಡೆಯೂ ಶಾಂತಿಯ ಬೀಡು
ಹೊಂದಾಣಿಕೆಯ ಬದುಕಿದು
ಸ್ವಾತಂತ್ರ್ಯದ ಸಿರಿಯದು..!!

ಅಭಿಮಾನ ಪ್ರವೃತ್ತಿಯು
ಜನರ ಹೊಂದಿಕೆಯು
ಸಮರವಿಲ್ಲ ಸಾಮ್ಯತೆಯ
ಬಾಳುವಿಕೆಯು..!!

ನಾವು ಭಾರತೀಯರು
ಭಾರತದ ಆಳ್ವಿಕೆಯು
ಹೊಂದಿ ಬಾಳುವ
ನವ ಚೈತನ್ಯವು..!!


Leave a Reply

Back To Top