ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
(ಜುಲ್ ಕಾಫಿಯಾ ಗಜಲ್, ಎರಡು ಕಾಫಿಯಾಗಳನು ನಕ್ಷತ್ರ ಚಿಹ್ನೆ ಮಧ್ಯೆ ತೋರಿದೆ)
ಬೆಳಗು ರಮ್ಯವಾಗಿತ್ತು ನಿನ್ನ ನೆನಪು ಕಾರಣ
ಬಿಸಿಲು ಸೌಮ್ಯವಾಗಿತ್ತು ನಿನ್ನ ಒನಪು ಕಾರಣ
ನಿನ್ನಂದದ ವಿಶೇಷಣಗಳು ದಾಖಲಿಸಿಹೆ ಮೆದುಳಿನಲಿ
ಸ್ಪರ್ಶಸುಖ ನನ್ನ ಗಮ್ಯವಾಗಿತ್ತು ದೇಹದ ಬಿಸುಪು ಕಾರಣ
ಆಂದ್ರದ ಗೆಳತಿ ‘ಎಂಕಿ’ ತೆಲುಗಿ ನಲಿ “ವ್ಯಾಸ” ಬರೆಯೆಂದಳು
ಪ್ರೀತಿ ಜನ್ಯವಾಗಿತ್ತು ಆಕೆಮೈ ನುಣುಪು ಕಾರಣ
ಮಲಯಾಳ ಮಾತ ತಿಳಿವೆನೆಂದು ಪೊನ್ನಾಚಿಗೆ ಗೊತ್ತಿತ್ತು
ನಿನ್ನ ಮುಖಕೆ ಆಕೆಗೂ ಸಾಮ್ಯವಿತ್ತು ಚೆಹರೆ ಹೊಳಪು ಕಾರಣ
ಕೃಷ್ಣಾ! ಒಂದೇ ಹೆಣ್ಣ ನೆಚ್ಚಿ ಕೂರಬಾರದೆಂದು ಅರಿತಿರಬೇಕು
ಇದು ನನಗೆ ವೇದ್ಯವಾಗಿತ್ತು ತನುವಿನ ಬಿಳಿಪು ಕಾರಣ
ವ್ಯಾಸ : ಪ್ರಕಟಿಸುವ ಬರವಣಿಗೆ/ಪ್ರಬಂಧವನು ವ್ಯಾಸಲು ಎನ್ನುವರು
ಪೊನ್ನಾಚಿ; ಮಲೆಯಾಳಿ ಯುವತಿಯ ಪ್ರತಿನಿಧಿ
ಎಂಕಿ : ತೆಲಗು ಪ್ರಾತಿನಿಧಿಕ ವೆಂಕಿ ಎಂಬ ಚೆಲುವೆ.
ಎರಡನೇ ಕಾಫಿಯಾ ” ಬಿಳುಪೇ, ಹೊಳಪೇ, ನುಣುಪೇ ಹೀಗೂ ಮಾಡಬಹುದು.(ಮಾಹಿತಿಗೆ)
ಬಾಗೇಪಲ್ಲಿ