ಶಾಂತಲಾ ಅವರ ಕವಿತೆ-ನೀರ ಗುಳ್ಳೆಗಳು

ಹೇಳಬೇಕಿತ್ತಾ ಮಾತುಗಳು
ನಿನ್ನೆ ಇವತ್ತು ನಾಳೆಯೂ ಅಷ್ಟು

ನಿನ್ನಲ್ಲಿ
ಹೌದು ನಿನ್ನಲ್ಲಿ
ಅದು ಹೊರಬರುವ ಸಂಭ್ರಮ
ಬರುತ್ತಾ ಬರುತ್ತಾ
ನೀ ರಗುಳ್ಳೆಯಂತೆ
ಒಂದರ ಮೇಲೊಂದು
ನೂರಾರು ಗುಂಪು ಗುಂಪಾಗಿ
ಮೇಲೆ ಏಳುತ್ತಾ
ಪಟ್ ಎಂದು
ಕಾಲಿ- ಕಾಲಿ
ಕಾಲಿ-ಕಾಲಿ
ದೂರದಲ್ಲಿ ಅಲ್ಲೊಂದು
ಇಲ್ಲೊಂದು ಕಾಣಸಿಕ್ಕಿದ್ದಾದರೂ
ಕೈಗಿಲ್ಲದಾಗಿತ್ತು,
ಗಾಳಿಯಲ್ಲಿ ಒಂದಾಗಿ
ಪ್ರಬಂಧದ ಮಾಲೆ
ಸೊರಗಿ ಸೊರಗಿ ಅಲ್ಲೊಂದು ಇಲ್ಲೊಂದು
ಶಬ್ದ ಅಕ್ಷರ ಗಳು
ಚೆಲ್ಲಾಪಿಲ್ಲಿಯಾಗಿ
ಹುಡುಕಿ ಪೋಣಿಸುವ
ಪರದಾಟ ನನದಾಗಿ
ನಿನ್ನೆ ಸರಿಯಿತು
ಇಂದು ಸರಿಯುತ್ತಿದೆ
ನಾಳೆಯೂ ದೂರವಿಲ್ಲ
ಕಂಡಾಗ ಕೇಳಿದಾಗ
ಯೋಗಕ್ಷೇಮ ಸಮಾಚಾರ
ಹುಸಿ ನಗುವಿನ ಕೊಂಡಿ
ಅದಕ್ಕೊಂದು ಸೊಬಗು
ನಾ ಮಲಗಿದಾಗ ನಡೆದಾಡುವಾಗ
ನಿನ್ನೊಡನೆ ಆಡುವ
ಧನಿಸುರುಳಿಗಳು
ದೇಹದ ಕಣ ಕಣಗಳಲಿ
ಇಂಗಿ ಹೋದ ಅನುಭವ
ಹೌದು ಈ ಅನುಭವವೇ
ಬದುಕಿಸಿ ಬದುಕಲು
ಕಲಿಸುವುದು
ಈ ಕ್ಷಣಕ್ಕೆ ಈ ನಿನಗೆ
ನೀನಾಗಿ ಇರಲು
ನೀರಗುಳ್ಳೆಗಳಂತೆ
ಗಾಳಿಯಲಿ
ಭೂಮಿ ಆಕಾಶದ
ಆಳಅಗಲಕೆ
ಒಂದಾಗಿ ಒಂದಾಗಿ ಒಂದೇ ಆಗಿ
ಮೌನ
ಮೌನ
ಮೌನ ವಾಗಿ.


Leave a Reply

Back To Top