ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ

ಎತ್ತ ನೋಡಿದರತ
ಅನ್ಯಾಯ- ಅತ್ಯಾಚಾರ
ಅಪಚಾರ- ವೈಮನಸ್ಸು,
ಕಾಲ ಜಾಲಕ್ಕೆ ಸಿಲುಕಿ
ಒದ್ದಾಡುತ್ತಿದೆ ಸಮಾಜ
ಈ ಜಗದ ವೇದನೆಗಳಿಗೆ
ಸ್ಪಂದಿಸದೆ ಮೂಕವಾಗಿ
ನಿಂದೆಹುದು ಅಪರಿಹಾರ್ಯದಲಿ
ಎಂದು ನಮ್ಮ ಕುಟುಂಬಕ್ಕೆ
ವಿಕೃತದ ದಾಳಿ ಎಸಗುಹುವರು,
ಯಾರು ಅರಿಯದಾಗಿದೆ ,
ಮೂಕರಾಗಿ ಉದ್ಭವಿಸುತ್ತಿರುವ
ಕುಹಕಗಳ ನಾಟಕಗಳ
ಕುರುಡ ಪ್ರೇಕ್ಷಕರಾಗಿ,
ಸ್ಪಂದಿಸದೆ- ವಿರೋಧಿಸದೆ
ನಿರ್ಲಿಪ್ತತೆಯಲಿ ,ಒಳಹೊರಗೆ
ಸೂಸಿ ವೈರತ್ವದ ಗಾಳಿ
ಜಗದಲಿ ಕವದಿದ್ದ
ಕತ್ತಲೆಯನ್ನು ಕಾಣದೆ,
ಸ್ತಬ್ಧರಾಗಿ- ಭಾವನೆಗಳ
ಕಡಲಲಿ ಹೊಯ್ದಾಡುತ್ತಾ,
ನಿಶಬ್ದವಾದ ಭಾವನೆಗಳು
ನಿಂತ ನೀರಾಗಿ ಕೊಳೆತು
ನಾರುವ ಮುನ್ನ-ಅದುಮಿಇಟ್ಟ,
ಭಾವವು ಆವೆಯಾಗಿ ಹೋಗಿ
ಕಾರ್ಮೋಡವಾಗಿ ಮಳೆಯಾಗಿ
ಮನದ ಧರೆಗೆ ಹರಿದು
ಹೊಸ ಚೈತನ್ಯ ಬೆಳೆ ಬೆಳೆದು
ಚಿಗುರೊಡೆಯಲಿ

ಕೆಚ್ಚೆದೆಯ ಭಾವ ಸಿಂಚೈಸಲಿ…..


Leave a Reply

Back To Top