ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?

ಬೇಕೆನಿಸಿದಷ್ಟೂ..
ಬೆಸೆದು ಬಿಡುವ ನಿನ್ನ
ಬೆಸುಗೆ ಅಸಮಾನ

ಬೇಡವೆಂದಷ್ಟೂ
ಬಸಿದು ಬಿಡುವ ನಿನ್ನೊ-
ಲವು ಅಮೂರ್ತ

ನನ್ನದೆಲ್ಲವನ್ನೂ..
ಕತ್ತಲಲಿ ಕರಗಿಸಿ
ಅರಗಿಸಿ-ಕೊಂಡೂ…
ಮತ್ತೆ ಇಂಚಿಂಚು
ತಡಕಾಡಬಲ್ಲ ನೀನು
ಅಸಾದ್ಯ

ಎದೆಗೆದೆಯೊತ್ತಿ
ತುಟಿಯ ಬೆರೆಸಿ
ಉಸಿರು ಕೊಲ್ಲುವ
ಅನುಭವ ನೀಡಿದ ನೀನೇ..
ಹಣೆಗೆ ಮುತ್ತೊಂದ
ಒತ್ತಿದಾಗ ನಿರಾಳದ
ಬೆವರುರುಳುವದು
ಕಿವಿಯ ಸಂದಿಯಲಿ

ನಿ‌ನ್ನ ಭೋರ್ಗರೆತಕೆ
ಒದ್ದೆಮುದ್ದೆ-ಯಾಗುವ
ಚಾಪೆಯ ಮೇಲೆಕೇ
ನಿನ್ನ ಕೋಪ ?

ಆಳೆತ್ತರದ ಕನ್ನಡಿ
ಎಂದರೆ ನನಗೆ
ಬಲು ಮುಜುಗರ .
ಮೊದಲು ಅದನ್ನು
ಮುಚ್ಚಿ ಬಿಡು
ನನ್ನೆದೆಯ ಗುಡಿಯೊಳಗೆ
ನಿನ್ನದೇ ಹಣತೆಯಿದೆ

ಅವಸರವೇಕೆ….
ನಿಸರ್ಗದ ಗರ್ಭದಿಂದ
ಛಳಿಯಾದರೂ ಹೊರಗೆ
ಬರಲಿ ತಡಿ !!


Leave a Reply

Back To Top