ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ಆಸೆಯ ಮೋಡ
ಯಾರ ಹಂಗಿನಲ್ಲೂ ಇಲ್ಲ ಮೋಡ
ತನಿಷ್ಠ ಬಂದಾಗ ಬೇಕಾದ ಆಕಾರದಲ್ಲಿ
ಹುಟ್ಟಿ ತೇಲುತ್ತವೆ ಮುಗಿಲು ತುಂಬಾ
ಎಲ್ಲಿ ಬೇಕಾದರಲ್ಲಿ.
ಸೂರ್ಯ ಚಂದ್ರರ ಕಿರಣಗಳಿಗೂ
ತಡೆ ಓಡ್ಡುವ ಗೋಡೆ ಭೇದಿಸಿ
ಅಲ್ಲಲ್ಲಿ ಆಗಾಗ ಇಣುಕಿ ಕಣ್ಣು ಮುಚ್ಚಾಲೆ
ಆಡುವದಷ್ಟೇ ನೋಡೆ
ಸಮಯ ಬಂದಾಗ ಬಳಲಿ ಕರಗಿ
ಕಂಬನಿಯ ಜಲಧಾರೆ ಸುರಿಸಿ
ಹೊಲಸುಗಳ ಸರಿಸಿ ಹೊಲಗದ್ದೆಗಳ
ನೇವರಿಸಿ ಸಾಗರದಲ್ಲಿ ಎಲ್ಲೋ
ಜಾರಿಮರೆಯಾಗಿದೆ ಪುನರ್ಜನ್ಮದ
ವಿಶ್ವಾಸ ಹುಟ್ಟಿದರೆ ಹುಟ್ಟುವೆ
ಮತ್ತೆ ಮೋಡವಾಗಿ.
ಹುಟ್ಟು ಸಾವಿನ ನಡುವೆ ಆಸೆಗಳೂ ಅಷ್ಟೇ
ಒಂದರ ಹಿಂದೆ ಇನ್ನೊಂದು ಬೇಕಾಬಿಟ್ಟಿಯಾಗಿ
ಮನದೊಳಗೆ ಹೊಕ್ಕಿ ನಲಿವಿಗಾಗಿ
ಅಲೆದಾಡುತ್ತವೆ ಯಾರ ಅಪ್ಪಣೆಗೂ ಕಾಯದೆ
ಜೀವನದಲ್ಲಿ ಸೆಣಸಾಡಿ ಸೋತು ಕಣ್ಣು ಮುಚ್ಚಿದ ಮೇಲೂ ಮತ್ತೆ ಅವತರಿಸುತ್ತವೆ ಕಟ್ಟಿಟ್ಟ ಚೀಲವನನು ಮತ್ತೊಮ್ಮೆ ಬಿಚ್ಚಿ
ಎಸ್ ವಿ ಹೆಗಡೆ
Great
Good luck Hegade