ಕಾವ್ಯ ಸಂಗಾತಿ
ಕಾವ್ಯ ಸುಧೆ(ರೇಖಾ)
ಅರ್ಪಿಸಿಕೊ
ನನ್ನದೇ ಎಂದುಕೊ
ಒಡೆದ ಚೂರುಗಳ ಜೋಡಿಸಿ
ತಂದಿರುವೆ
ಮೊದಲಿನಂತೆಯೇ ಮಿಡಿಯುತ್ತಿದೆ
ನೂರಿಪ್ಪತ್ತೂ ಎಂಬತ್ತು
ಪರೀಕ್ಷಿಸಿಕೊಂಡು ಬಂದಿದ್ದೇನೆ
ಆದರೆ ಅಲ್ಲಲ್ಲಿ ಜೋಡಿಸಿದ
ಗುರುತುಗಳು ಹಾಗೆಯೇ
ಉಳಿದು ಹೋಗಿವೆ….
ಇರಲಿ ಬಿಡು ಅದು ನನ್ನದೇ
ಮತ್ತೂ ನಿನಗೆಂದೇ ತಂದಿದ್ದೇನೆ
ಅರ್ಪಿಸಿಕೋ
ಮತ್ತೆ ಚೂರಾಗಲು ಇನ್ನೇನು
ಉಳಿದಿಲ್ಲ
ನಿನ್ನದೇ ನಿನಗರ್ಪಿಸಿ
ನೆಮ್ಮದಿಯಿಂದಿರುವೆ
————-
ಕಾವ್ಯ ಸುಧೆ.( ರೇಖಾ)