ವೈಚಾರಿಕ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಲಿಂಗಾಯತ ಧರ್ಮದಲ್ಲಿ
ಜಾತಿಗಳಿಲ್ಲ -ಕಸುಬುಗಳಿವೆ.(ವೃತ್ತಿ )
ಜಗತ್ತಿನ ಮೊದಲನೆಯ ಜಾತ್ಯಾತೀತ ಧರ್ಮವೆಂದರೆ ಲಿಂಗಾಯತ ಧರ್ಮ. ಬೇರೆ ಬೇರೆ ಧರ್ಮಗಳಲ್ಲಿ ಜಾತಿ ಉಪಜಾತಿಗಳಿವೆ. ಆದರೆ ಲಿಂಗ ತತ್ವ ಹಿಡಿದ ಲಿಂಗಾಯತರಲ್ಲಿ ಎಲ್ಲರೂ ಸಮಾನರು .ಇಲ್ಲಿ ಜಾತಿ ಭೇದ ಆರಿಸಲಾಗದು.ಕಾರಣ ಶರಣರು ಕಾಯಕ ದಾಸೋಹ ತತ್ವದಲ್ಲಿ ಶೃದ್ಧೆ ನಂಬಿಕೆ ಇಟ್ಟವರು.
” ಕಾಸಿ ಕಮ್ಮಾರನಾದ ಬಿಸಿ ಮಡಿವಾಳನಾದ ,ಹಾಸನಿಕ್ಕಿ ಸಾಲಿಗನಾದ ,ವೇದವನ್ನೋದಿ ಹಾರುವನಾದ ” ಎಂದು ಹೇಳಿದ ಬಸವಣ್ಣ ಅವರವರ ಉದ್ಯೋಗ ಕಸಬು ಕಾಯಕದ ಮೇಲೆ ಅವರವರ ವೃತ್ತಿ ಆಧಾರಿತವಾಗಿ ಸಮಾನ ಗೌರವವನ್ನು ಸೂಚಿಸಿದನು .
ಇಲ್ಲಿ ಕ್ಷೌರಿಕ ಮಡಿವಾಳನ ಹೂಗಾರ ಗಾಣಿಗ ಕುಂಬಾರ ಕಮ್ಮಾರ ಚಮ್ಮಾರ ಅಂಬಿಗ ಹೀಗೆ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಸಮಾಜಕ್ಕೆ ದಾಸೋಹ ಮಾಡುವ ಕಾರ್ಯದಲ್ಲಿ ಸಮಾನಾಗಿ ಭಾಗಿಯಾಗುತ್ತಿದ್ದರು. ಇಲ್ಲಿ ಯಾವುದೇ ತಾರತಮ್ಮ್ಯವಿರಲಿಲ್ಲ. ಅರಸನಿರಲಿ ಅಗಸನಿರಲಿ ಒಂದೇ ಪಂಕ್ತಿಯಲ್ಲಿ ಕುಳಿತು ಪ್ರಸಾದ ಸ್ವೀಕರಿಸಬೇಕು.
ಸಮಾನ ವೃತ್ತಿ ಗೌರವ ಸಾಮಾಜಿಕ ಸ್ಥಾನಮಾನ ವ್ಯಕ್ತಿಯ ಕಸುಬಿನಿಂದ ಬಂದದ್ದಲ್ಲ .ಆತನ ಲಿಂಗ ನಿಷ್ಠೆ ಕಾಯಕ ದಾಸೋಹ ಮನೋಭಾವದಿಂದ ಬಂದದ್ದು.
ಇಂತಹ ಸಮಾನತೆ ಯಾವುದೇ ಕಮ್ಯುನಿಸ್ಟ್ ಸೋಷಿಯಲಿಸ್ಟ್ ರಾಷ್ಟ್ರಗಳಲ್ಲಿ ಇಲ್ಲಿಯ ವರೆಗೆ ಕಂಡು ಬಂದಿಲ್ಲ..
ವ್ಯಕ್ತಿಯ ಗಳಿಕೆಗಿಂತ ಸಾಮಾಜಿಕ ಅಭಿವೃದ್ಧಿ ಶರಣರ ಆಶಯವಾಗಿತ್ತು.
ಹೀಗಾಗಿ ಕಾಯಕವು ( Collection of wealth ) ಒಂದು ಕಡ್ದಾಯವು ಹೇಗೋ ಹಾಗೆ ದಾಸೋಹವು ( Distribution of wealth ) ಕೂಡ ಕಡ್ಡಾಯವಾಗಿತ್ತು.ಹೀಗಾಗಿ ಅಲ್ಲಿ ವೃತ್ತಿ ಕಾಯಕದ ತಾರತಮ್ಯತೆ ಇರುತ್ತಿರಲಿಲ್ಲ .ಆದಾಯಕ್ಕನಗುಣವಾಗಿ ನಿರ್ದಿಷ್ಟ ಪ್ರಾಮಾಣದಲ್ಲಿ ತಾವು ಗಳಿಸಿದ ಗಳಿಕೆಯನ್ನು ಸಮಾಜಕ್ಕೆ ವಿನಿಯೋಗಿಸುವ ಹೊಸ ಅರ್ಥ ನೀತಿಯನ್ನು ಬಸವಣ್ಣ ಕೊಟ್ಟರು.
ಬಸವಣ್ಣ ಒಬ್ಬ ಅರ್ಥ ಸಚಿವ ಮುಂದೆ ಪ್ರಧಾನಿಯಾದರು. ( ಸಹೋದರ ಮಾವ ಬಲದೇವನವರ ಮರಣದ ನಂತರ).ಬಸವಣ್ಣನವರಿಗೆ ಭಂಡಾರ ಬಸವಣ್ಣನೆಂತಲೂ ,ದಂಡನಾಯಕ ಬಸವಣ್ಣನೆಂತಲೂ ಕರೆದಿದ್ದಾರೆ ಸಮಕಾಲೀನ ಶರಣರು.
ಲಿಂಗಾಯತ ಧರ್ಮವು ಜಾತಿ ಅವಲಂಬಿತ ಧರ್ಮವಾಗುವದಿಲ್ಲ.ಸಾರ್ವಕಾಲಿಕ ಸಮಾನತೆ, ಭ್ರಾತೃತ್ವ ಜಾತ್ಯಾತೀತ ಮನೋಭಾವ ಆದರ್ಶಗಳನ್ನು ಬಾಳು ಬದುಕಿದರು ಶರಣರು.
————————————————
ಡಾ.ಶಶಿಕಾಂತ.ಪಟ್ಟಣ.ಪೂನಾ
ಅತ್ಯುತ್ತಮ ಲೇಖನ
Excellent relevant Article Sir
ವೈಚಾರಿಕತೆಯ ಇಂಥ ಲೇಖನಗಳು ಎಲ್ಲರ ಕಣ್ತೆರೆಸಲು ಅನುಕೂಲ ಮತ್ತು ಅನಿವಾರ್ಯ ಕೂಡಾ ಎಲ್ಲರಿಗೂ ಎಲ್ಲವೂ ಗೊತ್ತಿರುವುದಿಲ್ಲ.. ದೊಡ್ಡ ದೊಡ್ಡ ಗ್ರಂಥಗಳನ್ನು ಓದಲಾಗುವುದಿಲ್ಲ… ಇಂಥ ಚಿಕ್ಕ ಚಿಕ್ಕ ಲೇಖನಗಳಿಂದ…ಒಂದು ವಿಷಯದ ಮೇಲೆ ಗಮನವಿರಿಸಿ ಬರೆಯುತ್ತಿರುವ ಲೇಖನಗಳು
ಸಮರೋಪಾದಿಯಲ್ಲಿ ಅನ್ನುವುದಕ್ಕಿಂತ ನಿಧಾನವಾಗಿ ಎಲ್ಲರ ಮನದ ಆಳದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡುತ್ತವೆ.
ಒಂದೊಳ್ಳೆಯ ಮಹತ್ವದ ಕಾರ್ಯ… ದಿನನಿತ್ಯ
ಬರೆಯುವ ಲೇಖನಗಳು ಪ್ರತಿಯೊಬ್ಬ ಮನುಷ್ಯನಲ್ಲಿ ಬದಲಾವಣೆ ತರಲು ಯಶಸ್ಸನ್ನು ಕಾಣುತ್ತವೆ.
ಸುಧಾ ಪಾಟೀಲ
ಬೆಳಗಾವಿ
ಯಾವ ಶರಣರನ್ನು ನೋಡಿದರು ಅವರ ಹೆಸರಿನ ಜೊತೆಗೆ ಅವರ ಕುಲ ಕಸುಬು ಇರುವುದನ್ನು ಕಾಣಬಹುದು ಅದರ ಜೊತೆಗೆ ಅವರು ಯಾವ ಕಾಯಕದಲ್ಲಿ ನಿರತರಾಗಿದ್ದರು ಅಂತ ತಿಳಿಯಬಹುದು
ನಿಜವಾದ ಅರ್ಥಪೂರ್ಣ ಲೇಖನ ಸರ್
ಅರ್ಥಪೂರ್ಣ ಲೇಖನ ಸರ್
Very good Article
ಅತ್ಯುತ್ತಮ ವೈಚಾರಿಕ ಲೇಖನ
ಲಿಂಗಾಯಿತ ಎಂಬುದು ಜಾತಿಯ ಕುರುಹಲ್ಲ ಅದೊಂದು ಸ್ವತಂತ್ರ ಜಾತ್ಯಾತೀತ ಧರ್ಮ
ಲಿಂಗ ಕಟ್ಟಿದವರೆಲ್ಲರೂ ಲಿಂಗಾಯಿತರೇ ಕಾಯಕ ಮತ್ತು ದಾಸೋಹದರಿವನ್ನು ನೀಡಿದ ಬಸವಣ್ಣನವರು ಸಮಾನತೆಯ ಉದ್ದೇಶಕ್ಕಾಗಿ ಪ್ರಚುರ ಪಡಿಸಿದ ಧರ್ಮ ಅಲ್ಲಮಪ್ರಭುಗಳು ಹೇಳುವಂತೆ ಬಸವಣ್ಣನವರು ಎಮಗೆಯೂ ಗುರು ನಿಮಗೆಯೂ ಗುರು ಲೇಖನ ವೈಚಾರಿಕತೆಯಿಂದ ಕೂಡಿದ್ದು ತುಂಬಾ ಅರ್ಥಪೂರ್ಣವಾಗಿದೆ ಸರ್