ಸವಿತಾ ದೇಶಮುಖ ಅವರ ಕವಿತೆ-ಲುಂಬಿನಿಯ ನೆರಳಲಿ

ಬುದ್ಧ ಬೋಧಾಮೃತವು ಸ್ಪೂರಿಸಿ
ಲುಂಬಿನಿಯ ನೆರಳಲಿ
ಜ್ಞಾನ ಆತ್ಮದಯೋಗ ಬೆಳಗಿನಲಿ
ವಿಮಲ ಜ್ಞಾನದ ಸವಿನುಂಡು…

ಅಂದು ರಾಜ ವೈಭವ ತೊರೆದು
ಸತ್ಯ ಶೋಧನೆಯತ್ತ ನಡೆದು
ಲೌಕಿಕ ಜೀವನ ಮಿಥ್ಯವೆಂದು
ಕಾರುಣ್ಯ ತುಂಬಿ ಹರೆದಿಹುದು

ಸತ್ಯ ಅಹಿಂಸೆಯ ಪಥದಲ್ಲಿ
ನಡದೆ ಸತ್ಯ ಪ್ರಭೇಯಲ್ಲಿ
ಮಿನುಗುವ ದಿವ್ಯತೆಯ ತೇಲಿ
ಜ್ಞಾನ ಮಾನಸ ಸರೋವರದಲ್ಲಿ

ಲುಂಬಿನಿಯ ನೆರಳ ತಂಪಿನಲ್ಲಿ
ಹಿಂದೆ ಅಳಿದುಳಿದ ಆಸೆಯ
ಅಳಿಸುತ, ಸಚ್ಚಾರಿತ್ರ್ಯದ
ದರ್ಶನ ಪಡೆದೆ ಪದ್ಮ ಪಾಣಿಯಲ್ಲಿ

ಬೆಳಗಿತು ಆತ್ಮ ಸುಯೋಗದಲಿ..

———————————

Leave a Reply

Back To Top