ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ಮಗುವಿನ ಮನದಂತೆ
ಜೀವನದ ರಥವನು ಮುನ್ನಡೆಸಿ
ನಡೆವಾಗ ರಥದೊಳಗಿನ ಉತ್ಸವ
ಮೂರುತಿಯೇ ನಂಬಿಕೆಯು
ಬಾಳಿನ ಗರ್ಭಗುಡಿಯಲಿ ನೆಲೆಸಿಹ
ಪ್ರೀತಿ-ಸ್ನೇಹಗಳ ಮಧುರಭಾವಗಳ
ಸಕಾರ ಸ್ವರೂಪವೇ ನಂಬಿಕೆಯು
ತಾಯಿಯ ಮೇಲಿನ ನಂಬಿಕೆಗೆ
ಮಗುವೇರುವುದು ಅವಳ ಕಂಕುಳನು
ಕುಣಿದಾಡುವುದು ಅವಳ ಮಡಿಲಿನಲಿ
ತಂದೆಯ ಮೇಲಿನ ನಂಬಿಕೆಯಲಿ
ಅವನ ಹೆಗಲೇರಿ ಸಂಭ್ರಮಿಸುವುದು
ಬೀಳುವ ಯಾವುದೇ ಭಯವಿಲ್ಲದೆ ಕಂದಮ್ಮ
ಬುವಿಗೆ ರವಿಯಮೇಲೆ ಬೆಳಕೀವ ನಂಬಿಕೆಯು
ಕತ್ತಲಲಿ ಭಯ ಹುಟ್ಟಿಸುವುದಿಲ್ಲ
ಜಗದೊಳಿತು ನಂಬಿಕೆಯ ಚಪ್ಪರದಡಿಯಲಿ
ಮನುಜರ ನಡುವೆ ಇರಬೇಕು
ನಂಬಿಕೆಯು ಸಂದೇಹಗಳಿಗೆ
ಎಡೆಮಾಡದ ಹಾಗೆ ಗಟ್ಟಿಯಾಗಿ
ಶೋಭಾ ನಾಗಭೂಷಣ
ಬಹಳ