ಕಾವ್ಯ ಸಂಗಾತಿ
ಕಾವ್ಯ ಸುಧೆ. ( ರೇಖಾ )
ಸಮ್ಮೋಹನ
ಯಾವ ಮಾಯೆ ಸೆರೆಹಿಡಿದಿದೆ
ಅದಾವ ರಾಗ ಬರ ಸೆಳೆದಿದೆ
ನಿನ್ನೊಲವ ತಪನೆ ತನು ಸೋಕಿದೆ
ಉಸಿರು ಬೆರೆತು ಮನ ಒಂದಾಗಿದೆ
ಕನಸೊ? ನನಸೋ? ಬೆರಗಾಗಿದೆ
ಭಾವದಲಿ ಮನವು ಮುಳುಗಿದೆ
ನೂರಾಸೆಗಳ ಕಂಗಳು ಅರಸಿದೆ
ಅನುರಾಗದಿ ತನುವಿದು ಅರಳಿದೆ
ಹೃದಯ ಮಿಡಿತಗಳ ಸಂಚಲನ
ಸಮ್ಮೋಹನದಿ ಸೃಷ್ಟಿ ಸಮ್ಮಿಲನ
ಸಾನಿಧ್ಯ ಸಮಾಗಮವೇ ಸೃಜನ
ಬೆಸೆದ ಭಾವದೊಲುಮೆ ಜೀವನ
ಮಧುರ ಮನೋಹರ ಗಾಯನ
ಮನಸು ಮನಸುಗಳ ಮಿಲನ
ಪ್ರೇಮ ಸುಧೆಯ ಸಂಜೀವನ
ಪುಟಿವ ಒಲವಿನಲೆಯ ನರ್ತನ….!!
————————–
ಕಾವ್ಯ ಸುಧೆ. ( ರೇಖಾ ).
ಕಾವ್ಯ ಸುಧೆ. ( ರೇಖಾ ).
ಸೊಗಸಾಗಿದೆ
ಥ್ಯಾಂಕ್ಸ್