ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ ಕವಿತೆಯನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ ಶಶಿಕಲಾ ಪಿ.

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಬೇಕು
ಅಲ್ಲಿ ಎಲ್ಲಾದರೂ ಮರದ ನೆರಳಲಿ ಕುಳಿತು
ರಾಮಭದ್ರನ ಮಹಿಮೆ ಹಾಡಬೇಕು

ಅಲ್ಲಿಹವು ಎತ್ತರದ ಮನೆಗಳು ಮಂದಿರವು
ಅಲ್ಲಿ ಬೇಕಾದಷ್ಟು ತುಳಸಿ ಹೂವು
ಹೆಜ್ಜೆ ಹೆಜ್ಜೆಗೆ ಅಲ್ಲಿ ಸಂಪಿಗೆಯ ಮರಗಳಿವೆ
ಗಿಳಿಗಳಿವೆ, ಇಲ್ಲ ಪಂಜರದ ನೋವು

ಅಲ್ಲಿ ಪುಷ್ಕರಣಿಗಳ ತುಂಬ ತಾವರೆಯಿಹವು
ಅಲ್ಲಿ ಬೀಸುವ ಗಾಳಿ ಚೈತ್ರಗಂಧ
ಅಲ್ಲಿ ಹಾರುವ ಹಂಸೆ, ಮೈಥಿಲಿಯ ಕನಸಿನೊಲು
ಬೆಡಗಿನಲಿ, ಗಿರಿಯೊಡೆದ ಹಿಗ್ಗಿನಿಂದ

ಅಲ್ಲಿ ವಿಶ್ವಾಮಿತ್ರ ಕುಳಿತಂಥ ಕಲ್ಲು ಇದೆ
ರಾಮಭದ್ರನು ನಿಂತ ಮರದ ನೆರಳು
ಇಂದಿಗೂ ನೆನೆಸುತಿದೆ ಮಣ್ಣ ಕಣಕಣ ಕೂಡ
ಶಿವನ ಬಿಲ್ಲಿನ ಹಗ್ಗವೆಳೆದ ಬೆರಳು

ಅಲ್ಲಿ ಮಣ್ಣೇ ಹಾಗೆ ಎಲ್ಲೆತ್ತಿಕೊಂಡರೂ
ರಾಮಭದ್ರನ ಕರುಣೆ ಸ್ಪಂದಿಸುವುದು
ಎಲ್ಲಿ ಹೊಲ ಉತ್ತರೂ ದೊರೆಯುವುದು ಹೆಣ್ಣು ಮಗು
ಜನಕರಾಯನ ಭಾಗ್ಯನಿಧಿಯ ತೆರೆದು

ಬಿಲ್ಲನೆತ್ತುವ ದಿವಸ ದೇಶವೇ ನೆರೆದಿತ್ತು
ರಾಮಭದ್ರು ತಮ್ಮನೊಡನೆ ಬರಲು
ದಾರಿಯುದ್ದಕು ಹೂವ ಸುರಿಸಿದವು ಹೆಮ್ಮರವು
ದಿವ್ಯ ಮಂಗಲವಾದ್ಯ ಮೊಳಗುತಿರಲು

ಹೃದಯತಟ್ಟೆಗಳಲ್ಲಿ ಕಣ್ಣಿನಾರತಿ ಎತ್ತಿ
ಮಿಥಿಲೆ ಸಂಭ್ರಮದಿಂದ ಎದುರುಗೊಂಡು
ವೈದೇಹಿಯನು ಬಯಸಿ ಬಂದ ರಾಜರ ಆಸೆ
ಶಿವನ ಬಿಲ್ಲಿನ ಜೊತೆಗೆ ತುಂಡು ತುಂಡು

ಸುರಿದ ಮಂತ್ರಾಕ್ಷತೆಯ ಸುತ್ತ ಜಯಜಯಕಾರ
ರಾಮಭದ್ರಗೆ ಕಮಲಮಾಲೆ ಹಾಕಿ
ಬದಿಗೆ ನಿಂತಳು ಸೀತೆ, ಜನಕರಾಜನ ಭಾಗ್ಯ
ಲೋಕಗಳ ಹರ್ಷವೇ ಹರಿಯಿತುಕ್ಕಿ

ಮಗಳ ಮನೆತುಂಬಿಸುತ ಬೀಳ್ಕೊಡಲು ಜನಕನು
ಹನಿದುಂಬಿದವು ಮಿಥಿಲೆಯ ಹೃದಯ – ಕಣ್ಣು
“ಮಗಳೆ ಮಂಗಲವಿರಲಿ” ಎಂದು ಉಡುಗೊರೆಯಿತ್ತ
ಬಂಗಾರ ಕರಡಿಗೆಯ ತುಂಬ ಹೊಲದ ಮಣ್ಣು

ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
ಬೀದಿಬೀದಿಯನಲೆದು ನೋಡಿ ಬರುವೆ
ರಾಮಭದ್ರನ ಕಥೆಯ ಹಾಡಿ ಕರಡಿಗೆಯಲ್ಲಿ
ಜನಕರಾಜನ ಹೊಲದ ಮಣ್ಣು ತರುವೆ

மிதிலை

ஏதோ ஒரு நாள் நான் மிதிலைக்கு போயி
வீதி வீதியிலும் சுத்தி பார்க்கணும்
அங்க எங்கையனாலும் மரத்தோட நிழலில் அமர்ந்த்து
ராமபத்திரனின் மகிமை பாடவேண்டும்.

அங்க இருக்கிறது உயரமான வீடுகள், கோவில்கள்
அங்கு தேவையான துளசி பூ
அடிக்கடிக்கும் அங்க செண்பகத்தின் மரங்கள் இருக்கிறது
கிளிகளும் இருக்கிறது
இல்லாதது மட்டும் கூண்டுகளில் இருக்கும் வலி.
அங்க புஷ்கரணிகளின் பூர்த்தி தாமரைப்பூ இருக்கிறது

அங்கு வீசும் காத்து சைத்ரா கந்தம்
அங்கு பறக்கும் அன்னப்பறவை, மைதிலியின் கனவுக்குள்
அற்புதமான மலையுடைன்ந்த
மகிழ்ச்சியுடன்.

அங்க விசுவாமித்ரர் அமர்ந்திருந்த கல் இருக்கிறது
ராமபத்திறன் நிறுத்திறந்த மரத்தின் நிழல்
இன்னிக்கும், மறவாதிருக்கிருது மண்ணின்
துகளும் கூட
வில்லன் வில்வான் இளுந்த விரல்.

அங்க மண்ணே அப்படித்தான் எங்க எடுத்திகொண்டாலும்
ராமபாத்திரணின் இறக்கம் பதிழ்கொடுக்குது
எங்க நிலம் உழுந்தாலும் தோரக்கும் பெண் குழந்தை
ஜனகராஜணின் பாக்யணிதியம் திறந்து.

வில்லை எடுத்தது நாள் நாட்டே சேர்நிதிருந்தது
ரமாபத்திரன் தம்பியுடன் வரால்
பாதையோடு பூ ஊற்றது பெர்மரம்
திவ்ய மங்கள வாத்தியம் கேட்கிறது.

இதயத்தட்டுக்களில் கண்ணின் ஆரதி எடுத்து
மிதிலை இன்பத்தில் எதிர்கொண்டு
வைதேகியய் வேண்டி வந்த அரசர் ஆசை
வில்லன் வில்லுகூட துண்டு துண்டு.

ஊறின மந்த்ரக்ஷதையின் சுற்றும் வெற்றி வாழக்கைக்கள்
ராம பத்திரணுக்கு தாமரை மாலை போட்டு
பக்கத்தில் நிந்தால் சீதை, ஜனகராஜநின் பாகியம்
உலகஙகளோட மகிழ்சியே வழியோடும்.

மகளை அனுப்பிகொடல் ஜனகர்
நிருப்ப வந்தாங்க மிதிலயின் இதயம் – விழிகள்
மவளே மங்களவிரகட்டும் என்று நன்கொடை இடுத்தார்
தங்கமான சிமிழ் முழுமை நிலத்தின மண்ணு.

எதோ ஒரு நாள் நான் மிதிலைக்கு போயி
வீதிகளில் சுத்தி பார்த்து வருவேன்
ராம பத்திரணின் கதையை பாடி விமிழத்தில்
ஜனகராஜணின் நில்த்தின் மண்ணுத் தருவேன்.

ಮಿತಿಲೈ

ಏದೋ ಒರು ನಾಲ್ ನಾನ್ ಮಿತಿಲೈಕ್ಕು ಪೋಯಿ
ವೀದಿ ವೀದಿಯುಲುಂ ಸುತ್ತಿ ಪಾರ್ಕವೆಂಡ್ರುಮ್
ಅಂಗ ಎಂಗೆಯಾನಾಲುಂ ಮರತ್ತೊತೋಡ ನಿಳಲಿಲ್ ಅಮರ್ನ್ದು
ರಾಮಭದ್ರನಿನ್ ಮಗಿಮೈ ಪಾಡವೇನ್ರುಮ್.

ಅಂಗೆ ಇರುಕ್ಕಿರದು ಉಯರಮಾನ ವೀಡುಕ್ಕಳ್, ಕೊವಿಲ್ ಕ್ಕಳ್
ಅಂಗೆ ತೇವೈಯಾನ ತುಳಸಿ ಪೂ
ಅಡಿಕ್ಕಡಿಕ್ಕುಂ ಅಂಗೆ ಸೆನ್ಬಗತ್ತಿನ್ ಮರಂಗಳು ಇರುಕ್ಕಿರದು
ಕಿಳಿಗಳುಂ ಇರುಕ್ಕಿರದು
ಇಲ್ಲಾದದು ಮಟ್ಟುಂ ಕೂಂಡುಗಳಿಲ್ ಇರುಕ್ಕುಂ ವಲಿ.

ಅಂಗೆ ಪುಷ್ಕರಣಿಗಳಿನ್ ಪೂರ್ತಿ ತಾಮರೈ ಫೂ ಇರುಕ್ಕಿರದು
ಅಂಗೆ ವೀಸುಂ ಕಾತ್ತು ಸೈತ್ರ ಗಂದಂ
ಅಂಗೆ ಪರಕ್ಕುಂ ಅನ್ನ ಪರವೈ ಮೈತಿಲಿಯಿನ್ ಕನವುಕ್ಕುಳ್ ಅರ್ಬುದಮಾನ ಮಲೈಯುಡೈoದ ಮಗಿಲ್ಚಿಯುಡನ್.

ಅಂಗೆ ವಿಶ್ವಾಮಿತ್ರರ್ ಅಮರ್ತಿರುಂದ ಕಲ್ ಇರುಕ್ಕಿರದು
ರಾಮಬತ್ತಿರನ್ ನಿರುತ್ತಿರುಂದ ಮರತ್ತಿನ್ ನಿಳಲ್
ಇನ್ನಿಕ್ಕುಂ ಮರವಾಗಿರುಕ್ಕಿರದು
ಮಣ್ಣಿನ್ ತುಗಳುಂ ಕೂಡ
ವಿಲ್ಲನ್ ವಿಲ್ವಾನ್ ಇಳುಂದ ವಿರಲ್.

ಅಂಗೆ ಮಣ್ಣೆ ಅಪ್ಪಡಿದಾನ್ ಎಂಗೆ ಎಡುತ್ತು ಕೊಂಡಾಲುಮ್
ರಾಮ ಬತ್ತಿರನಿನ್ ಇರಕ್ಕಂ ಬದಿಲ್ ಕೊಡುಕ್ಕುರದು
ಎಂಗೆ ನಿಲಮ್ ಉಳುರ್ತಾಲುಂ ದೊರಕ್ಕುಂ ಪೆಣ್ ಕುಳoದೈ
ಜನಕರಾಜನಿನ್ ಭಾಗ್ಯo ತಿರಂದು.

ವಿಲ್ಲೈ ಎಡುತ್ತದು ನಾಲ್ ನಾಟ್ಟೇ ಸೇರ್ನ್ದಿರುಂದದು
ರಾಮ ಬತ್ತಿರನ್ ತಂಬಿಯುಡನ್ ವರಾಲ್
ಪಾದೈಯೋಡು ಪೂ ಊಟ್ರುದು ಪರ್ಮರಂ
ದಿವ್ಯ ಮಂಗಳ ವಾತ್ತಿಯಂ ಕೇಟ್ಕಿರದು.

ಇದಯತ್ತಟ್ಟುಗಳಿಲ್ ಕಣ್ಣಿನ್ ಆರತಿ ಎಡುತ್ತು
ಮಿತಿಳೈ ಇನ್ಬತ್ತಿಲ್ ಎದುರ್ಕೊಂಡು
ವೈದೇಹಿಯಾಯ್ ವೇಂಡಿ ವಂದ ಅರಸರ್ ಆಸೈ
ವಿಲ್ಲನ್ ವಿಲ್ಲುಕ್ಕೂಡ ತುಂಡು ತುಂಡು.

ಊಟ್ರಿನ ಮಂತ್ರಾಕ್ಷತೆಯಾಯ್ ಸುಟ್ರುಂ ವೆಟ್ರಿ ವಾಳ್ಕೈಗಳ್
ರಾಮಬತ್ತಿರನುಕ್ಕು ತಾಮರೈ ಮಾಲೈ ಪೋಟ್ಟು
ಪಕ್ಕತ್ತಿಲ್ ನಿಂದಾಳ್ ಸೀತೈ
ಜನಕರಾಜನಿನ್ ಬಾಗಿಯಂ ಉಲಗಂಗಳೊಡ
ಮಗಿಲ್ಚಿಯೆ ವಳಿಯೋಡುಂ.

ಮಗಲೈ ಅನುಪ್ಪಿಕೊಡಲ್ ಜನಕರ್
ನಿರುಪ್ಪವಂದಾಂಗ ಮಿತಿಲಯಿನ್ ಇದಯಂ – ವಿಳಿಗಲ್
ಮಗಳೇ ಮಂಗಳವಿರಕಟ್ಟುಂ ಎನ್ರು ನನ್ ಗೊಡೈಯಿಡುತ್ತಾರ್
ತಂಗಮಾನ ಚಿಮಿಳ್ ಮುಳುಮೈ ನಿಲತ್ತಿನ್ ಮಣ್ಣು.

ಏದೋ ಒರು ನಾಲ್ ನಾನ್ ಮಿತಿಲಯಿಕ್ಕು ಪೋಯಿ
ವೀದಿ ವೀದಿ ಗಳಿಲ್ ಸುತ್ತಿ ಪಾರ್ತು ವರುವೆನ್
ರಾಮ ಬತ್ತಿರನಿನ್ ಕತೆಯಾಯ್ ಪಾಡಿ
ಚಿಮಿಳತ್ತಿಲ್ ಜನಕ ರಾಜನಿನ್ ನಿಲತ್ತಿನ್ ಮಣ್ನೈ
ತರುವೆನ್.


One thought on “ಸು.ರಂ.ಎಕ್ಕುಂಡಿಯವರ ‘ಮಿಥಿಲೆ’ ಕವಿತೆಯನ್ನು ತಮಿಳು ಭಾಷೆಗೆ ಅನುವಾದಿಸಿದ್ದಾರೆ ಶಶಿಕಲಾ ಪಿ.

Leave a Reply

Back To Top