ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
ನೆನೆ ಮನವೆ ಬಸವನ
ನೆನೆ ಮನವೇ ಅಣ್ಣ ಬಸವಣ್ಣನ
ತಿಳಿ ಮಗುವೇ ನೀನವರ ವಚನವನ್ನ
ಕಾಯಕವೇ ಕೈಲಾಸವೆಂದರುಹಿದರು
ಜಾತಿ ಮತ ನೂಕಾಚೆಗೆ ಎಂದರವರು
ನಾರಿಯರ ಶರಣಿಯರೆಂದು ಗೌರವಿಸಿದರು
ಕೂಡಲಸಂಗಮನಾಥನ ಒಲಿಸಿಕೊಂಡವರು
ಅಡ್ಡಿಯಾಗದು ಭವಸಾಗರ ವೆಂದೂ
ದೈವ ಸಾಕ್ಷಾತ್ಕಾರ ತಾ ಪಡೆಯಲದು
ಅಣ್ಣನ ವಚನವದು ಬರಿಯ ಬರಹವಲ್ಲ
ಪಚನಗೊಳಿಸಿದರೆ ನಮ್ಮ ಬಾಳು ಸಿಹಿಬೆಲ್ಲ
ಯುಗಗಳೆಷ್ಟೆ ಉರುಳಿದರೂ ಯುಗಪುರುಷರಾದಿರಿ
ಜಗ ಬೆಳಗಲು ಬಂದ ಜ್ಞಾನ ಜ್ಯೋತಿ ನೀವಾದಿರಿ
ನೀಗಲು ಭುವಿಯ ಜ್ಞಾನಾಂಧಕಾರವನು
ಆ ದೈವ ಕಳಿಸಿದ ದೇವ ಪುರುಷನೇ ನೀನು
ಜ್ಙಾನದ ಜ್ಯೋತಿಯ ಜಗಕೆ ಬೆಳಗಿದಿರಿ
ನಾನು ನನದೆಂಬ ಸ್ವಾರ್ಥವಳಿದಿರಿ
ಅನುಭವ ಮಂಟಪದಿ ಸೇರಿಸಿದಿರಿ ಶರಣರನು
ಅನುಭಾವಿಗಳ ಅನುಭವವು ತಳೆದವು ವಚನದ ರೂಪವನು
ಸಮಾನತೆಯ ಬಿತ್ತಿದ ಭಕ್ತಿ ಭಂಡಾರಿ ಬೀಜ
ಕಾಯಕದಿ ಕೈಲಾಸ ಕಂಡ ಜಗ ಬೆಳಗಿದ ರವಿತೇಜ
ಕಾಯುತಿಹಳು ಧರಣಿ ದೇವ ಪುರುಷನಿಗೆ ಜನ್ಮ ನೀಡಲು
ಮತ್ತೊಮ್ಮೆ ಉದಯಿಸಿರಿ ಜ್ಞಾನಜ್ಯೋತಿಯ ಬೆಳಗಲು
ಮಧುಮಾಲತಿರುದ್ರೇಶ್ ಬೇಲೂರು
ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು
ಕವನದ ಉದ್ದೇಶವೇನು..? ಅದು ಸಾರ್ಥಕವಾಗಿದೆಯೇ…?
////೦೦೦೦/////
ಜಿ.ಎಸ್.ಪ್ರಕಾಶ್,ಬೆಂಗಳೂರು
೦೦೦