ಪ್ರೊ. ಸಿದ್ದು ಸಾವಳಸಂಗ ಬಲ್ಲವರ ಮಾತು ಬೆಲ್ಲ

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಬಲ್ಲವರ ಮಾತು ಬೆಲ್ಲ

ಬಲ್ಲವರ ಮಾತು ಬೆಲ್ಲದಂತಿರಲು
ಅಲ್ಲದವರ ಮಾತಿಗೆ ಕಿವಿ ಕೊಡುವುದೇಕೆ ?
ಜಗದಲಿ ಸತ್ಯವಂತರೆ ಇಲ್ಲವೆಂದು ಭ್ರಮಿಸಿ,

ಸುಳ್ಳುಗಾರರ ಮಾಯಾ ಜಾಲಕೆ ಮರುಳಾಗುವುದೇಕೆ?
ತನ್ನನು ತಾನು ಗೆಲ್ಲಲಾಗದ ಅಸಮರ್ಥ
ಜಗವ ಗೆಲ್ಲುತ್ತೇನೆಂದು ಹೊರಡುವುದೇಕೆ ?
ಕಲ್ಲು-ಮುಳ್ಳುಗಳ ಹಾದಿಯಲಿ ಹೆಜ್ಜೆ ಹಾಕದೆ
ಸುಖದ ಸುಪತ್ತಿಗೆಯಲಿ ಕುಳಿತು,
ಸಾಧನೆ ಮಾಡುವೆನೆನ್ನುವ ಅಹಂಕಾರವೇಕೆ ?
ಮನದ ಮಾತನು ಕೇಳದೆ ತಾನೇ ಶ್ರೇಷ್ಠವೆಂದು
ದುರಹಂಕಾರದಿ ಮೆರೆಯುವುದೇಕೆ ?
ಬಾಹ್ಯ ಅಂದ-ಚಂದಕೆ ಮರುಳಾಗಿ
ಅಂತರಂಗದ ಸೌಂದರ್ಯ ಮರೆಯುವುದೇಕೆ ?
ಇಲ್ಲ-ಸಲ್ಲದ ಚಾಡಿಕೋರರ ಮಾತು ಕೇಳಿ
ಸುಂದರ ಅನುಬಂಧ ಹಾಳುಮಾಡಿಕೊಳ್ಳುವುದೇಕೆ ?


ಹೆತ್ತ ತಂದೆ-ತಾಯಿಗಳನ್ನು ಮನೆಯಿಂದ ಹೊರಹಾಕಿ
ಪೂಜೆ-ಪುನಷ್ಕಾರಾದಿಗಳನ್ನು ಮಾಡುವುದೇಕೆ ?
ಅಣ್ಣ-ತಮ್ಮಂದಿರಿಗೆ ಮೋಸ ಮಾಡಿ
ದಾನ-ಧರ್ಮಾದಿಗಳನ್ನು ಮಾಡುವುದೇಕೆ ?
ಗುರು-ಹಿರಿಯರನ್ನು ನಿಂದಿಸಿ
ತಾನೇ ದೊಡ್ಡವನೆಂದು ಮೆರೆಯುವುದೇಕೆ ?
ಸಾಧನೆಯ ಹಾದಿಯಲಿ ಮುನ್ನಡೆವವರ
ಕಾಲನೆಳೆದು ದುರ್ಬುದ್ಧಿ ತೋರುವುದೇಕೆ ?
ಸುಂದರ ಕನ್ನಡ ಭಾಷೆಯನು ಮರೆತು
ಅನ್ಯ ಭಾಷೆಗೆ ದಾಸರಾಗುವುದೇಕೆ ?


ಪ್ರೊ. ಸಿದ್ದು ಸಾವಳಸಂಗ

Leave a Reply

Back To Top