ಕಾವ್ಯ ಸುಧೆ ರೇಖಾ ಕವಿತೆ-ಅಂತರ್ಮುಖಿ

ಕಾವ್ಯ ಸಂಗಾತಿ

ಕಾವ್ಯ ಸುಧೆ ರೇಖಾ

ಅಂತರ್ಮುಖಿ

ನಿನ್ಹೆಸರ ಮೋಹದಲಿ ಮರೆತೆ ನಾ ನನ್ನನೆ
ಮಾತಿರದೆ ಮೌನವಾದೆ ಅವರಿವರ ಪಾಲಿಗೆ
ನನ್ನೊಳಗನು ಕಂಡುಕೊಳ್ಳುವ ಪರಿಗೆ ಸೋತೆನೆ
ಶರಣಾದೆ ಹಗಲಲ್ಲೂ ನಿನ್ನದೇ ಕನಸಿಗೆ……

ಕನವರಿಕೆ ಸುಮ್ಮನೆ ಅಳಿದುಳಿದ ನಾಳೆಗಳಿಗೆ
ಮಧುರ ಸಿಹಿ ನೆನಪಲಿ ಅಂತರ್ಮುಖಿಯಾದೆನೆ
ಅರಿಯದಿರೆ ಬೇಡಬಿಡು ಮನವರಿಕೆ ಕಡೆಗೆ
ಕಾತುರದಿ ಬರುವಿಕೆಗಾಗಿ ಕಾದು ಕುಳಿತಿಹೆನೆ….

ಹೊಸಕಿಹೋದ ಹೃದಯ ವೇದನೆ ತಾಳೆನೆ
ಬಲ್ಲೆ ಒಲ್ಲನವನು ಸೋಲುವಾಸೆ ಯಾಕ್ಹೀಗೆ
ಕಣ್ಣೆದುರು ಮನದಲ್ಲಿ ಮತ್ತವನೆ ಬಂದನೆ
ಹಾಳು ಜಾಡಿನಲಿ ಸಿಲುಕಿದೆನೆ ಕೊರಗಿಗೆ…..!!


ಕಾವ್ಯ ಸುಧೆ. ( ರೇಖಾ )

2 thoughts on “ಕಾವ್ಯ ಸುಧೆ ರೇಖಾ ಕವಿತೆ-ಅಂತರ್ಮುಖಿ

  1. ಅದ್ಭುತ ಅಮೋಘ ಸುಂದರ ಕವನ ರಚನೆ ಕಾವ್ಯ ಸುದೆ

    ಶ್ರೀಪಾದ

Leave a Reply

Back To Top