ರೇಷ್ಮಾ ಕಂದಕೂರ ಕವಿತೆ ತೇಪೆ

ಕಾವ್ಯ ಸಂಗಾತಿ

ರೇಷ್ಮಾ ಕಂದಕೂರ

ತೇಪೆ

ಬಿರಿದ ಗೋಡೆಗೂ
ಮುರಿದ ಮನಕೂ
ಚಿತ್ತಾರದ ರಂಗವಲ್ಲಿ ಹಾಕಿ
ಆದ ತಪ್ಪನು ತಿದ್ದುವ ನೆಪದಲಿ
ಅಲ್ಲಲ್ಲಿ ತೇಪೆ ಹಾಕುತ್ತಿದ್ದೇನೆ.

ಅಭಿವ್ಯಕ್ತಿಯ ಸ್ವಾತಂತ್ರ್ಯದಿ
ಕೊಸರಿ ಹೋದವರ ಸೇರಲು
ಕಳವಳಗೊಂಡವರ ಸುಳಿಯಲು
ಮೇರೆ ಮೀರಿದ ಕಂದಕವ ತುಂಬಲು
ಆತ್ಮಾವಲೋಕನದ ಮಹತ್ವಾಕಾಂಕ್ಷೆ ಫಲಕೆ.

ಒಮ್ಮೊಮ್ಮೆ ಮೌನದೊಡವೆಯಲಿ
ಚದುರಿದ ಅಂಗಳಕೆ ಚೆಲುವ ಭಿತ್ತರದಿ
ಧಾವಂತದ ಬದುಕಿಗೆ ಜೀವಂತವಾಗಿ
ಅನುಕ್ಷಣವ ಅನುಭವಿಸಲು಼
ಮುಕ್ಕಾಗುವದನು ತಪ್ಪಿಸಲು.

ಹರಿದ ಕಾಗದವ ಹೊಂದಿಸಲು
ಮಾನ ಮುಚ್ಚುವ ಉಡುಪಿಗೆ
ತುಂಡಾದ ನೋಟಿಗೂ
ಸೊರಗಿ ಕೊರಗುವನು ತಡೆಯಲು
ವಾದ ವಿವಾದವ ತಪ್ಪಿಸಲು ತೇಪೆ ಹಚ್ಚಬೇಕಿದೆ.

ರೇಷ್ಮಾ ಕಂದಕೂರ

Leave a Reply

Back To Top