ಶಾಂತಲಾ ಮಧು-ಕಳೆೆದು ಹೊದ ಕನಸಿಗೆ

ಕಾವ್ಯ ಸಂಗಾತಿ

ಶಾಂತಲಾ ಮಧು-

ಕಳೆೆದು ಹೊದ ಕನಸಿಗೆ

ಕಳೆೆದು ಹೊದ ಕನಸಿಗೆ
ಸುಂಕ ಕಟ್ಟುವುದೇಕೆ
ನಾ ಓದಿದ ಪದ್ಯದ ಸಾಲು••
ನಕ್ಷತ್ರ ಮಾಲೆಯ
ಎಳೆದು ಎಳೆ ಎಳೆಯಾಗಿ
ಬಿಚ್ಚಿ ಬೆವತಂತೆ

ಬಾನಂಗಳದಲ್ಲಿ
ಮೊಡದ ತೆರೆ ತೆರೆಯ
ಮುಷ್ಟಿಯಲಿ
ಹಿಡಿವೆನೆನ್ನುವ ಉತ್ಸಾಹದ
ಮನದಂತೆ

ಗಿಲೀಟಿನ ಬುಗುರಿ
ತಿರುತಿರುಗಿ ಸುತ್ತಿ
ಮತ್ತದೆ ಸುತ್ತಿ
ಸುತ್ತುತ್ತಲೆ ಇದೆ
ಎಂಬ ಭ್ರಮೆಯಾ
ಕ್ಷಣದಲಿ ನೆಲಕಚ್ಚಿದಂತೆ

ಹೃದಯದಾಬಿಸಿ ಬಡಿತಕೆ
ಸೆಲೆಯಾಗಿ ಕಲೆಯಾಗಿ
ಕಣ್ಮಣಿಗಳ ಮನದಾಳದ
ನೋಟತಾ ಎನುತ
ಬಸಿರಿನಾಳದ ಉರಿಗೆ
ಕೈ ಚಾಚಿ ಸಾಂತ್ವನ
ಬಯಸಿ ಬೆಂಡಾಗಿ
ಜೀವದ ಉಸಿರು
ನಿಟ್ಟುಸಿರಾದಂತೆ

ಹೊಸಮುಗಿಲು ಹೊಸ
ಹರುಷ ಹೊಸ ಮಾಸ
ಹೊಸ ಚಿಗುರು
ನಲಿವನೋಟದ ಚಂದ್ರ
ಮೃದು ಮಾತಿನ ಮಲ್ಲಿಗೆಗೆ
ನೀನಾಗು ನಿನಗಾಗಿ
ಬೆಳಕು ಹೊಂಬೆಳಕಾಗಿ
ನೀವಾಳಿಸಿ ಕತ್ತಲೆಯ
ಮೌನವನು
ಸುಖಿಸ ಬಾರದೆ ಜೀವ
ನೀನಾಗಿ ನಿನಗಾಗಿ

ಕಳೆದ ಕನಸಿಗೆ
ಸುಂಕ ಕಟ್ಟುವುದೇಕೆ


ಶಾಂತಲಾ ಮಧು

Leave a Reply

Back To Top