ಕಾವ್ಯ ಸಂಗಾತಿ
ಡಾ.ಡೋ.ನಾ.ವೆಂಕಟೇಶ
ಒಡಕು ಪಾತ್ರಗಳು
ಒಡೆದ ಬಿಂದಿಗೆಯ ನೀರಿನಂತೆ
ಮನಸ್ಸು.
ವಾಸಿಸಿದ ದೇಹ ಖಾಲಿ ಪಾತ್ರೆ
ಗುಡು ಗುಡಿಸಿ
ಗುಜರಿಯವನ ದಾಸ್ತಾನು!
ಮನಸ್ಸು
ಮಂಗಾಟವಾಡಿ
ಕೆಸರೆರೆಚಿ ಕಳ್ಳಾಟವಾಡಿ
ಕೂಡಿಟ್ಟಿದ್ದನ್ನ
ಬುತ್ತಿ ಕಟ್ಟಿದ್ದು ಹಳಸಲು!
ಬದುಕಿನ ಕನಸ ಗೋಪುರಗಳು
ದಿನಕ್ಕೆರಡು ಬಾರಿ ಸಮಯ
ಸರಿಯಾಗಿ ತೋರಿಸುವ
ಗತಿ ಕಳೆದು ಕೊಂಡ
ಗಡಿಯಾರಗಳು!
ಅವನು ಮಾಡಿದ ನಿಯಮ
ಗಡಿಯಾರದಂತಲ್ಲ-
ಅನಂತ!
ಸೂರ್ಯ ಚಂದ್ರರು
ಅನಂತಾನಂತ ತಾರೆಯರು
ಗಾಳಿ ಮಳೆಯಲ್ಲಿ
ಹರಿವ ಜೀವನದಿಯಲ್ಲಿ
ತಮ್ಮದೇ ಓಘ
ತಮ್ಮದೇ ಪಾತ್ರದಲ್ಲಿ ನಿತ್ಯ
ನೂತನ ರಮ್ಯ
ಸುಶ್ರಾವ್ಯ
ನಾವು ಅದೇ ಪಾತ್ರಧಾರಿಗಳು
ಒಡಕು ಪಾತ್ರೆಗಳು
ಸದ್ದು ಮಾಡುವವರು!
ನಿಶ್ಯಬ್ದರಾಗುವವರು!
ಡಾ.ಡೋ.ನಾ.ವೆಂಕಟೇಶ
Nice Bhavoji
Thank you Sona!
ನಿಮ್ಮ ಕವಿತೆಗಳಲ್ಲಿ ಇದೊಂದು ಅವಿಸ್ಮರಣೀಯ ಹಾಗೂ ಆಗಾಗ ಓದಿಕೊಳ್ಳಲೇಬೇಕಾದ, ಓದಿಕೊಂಡು ಆಗಾಗ ಉದ್ಭವಿಸುವ ನಮ್ಮ ‘ಅಹಂ’ಗಳನ್ನು ಸದ್ದಿಲ್ಲದೆ ಅಡಗಿಸಿಟ್ಟು ನೆಮ್ಮದಿಯ ಕಂಡುಕೊಳ್ಳಲು ಪ್ರೇರೇಪಿಸುವ ಅದ್ಭುತ ಕವನ. ಅಭಿನಂದನೆಗಳು ನಿಮಗೆ ವೆಂಕಟೇಶ್.
ಧನ್ಯವಾದಗಳು ಮೂರ್ತಿ!
ಸುಂದರ ಕವಿತೆ ವೆಂಕಣ್ಣ.ಈ ಬದುಕಿನ ವಾಸ್ತವವನ್ನು ಚೆನ್ನಾಗಿ ವಿವರಿಸಿದ್ದೀರಿ.ನಮಗೆಲ್ಲರಿಗೂ ಒಳ್ಳೆಯ ಪಾಠ. ಧನ್ಯವಾದಗಳು.
ಧನ್ಯವಾದಗಳು. ನಮ್ಮ ಬದುಕಿನ ಮಿತಿಯನ್ನು ಮೀರಿ ಹೋಗದೆ ಇರೋಣ,ಅಲ್ವಾ!