ಡಾ.ಸರೋಜಾ ಜಾಧವ ಗೆಳತಿಯರು

ಕಾವ್ಯ ಸಂಗಾತಿ

ಡಾ.ಸರೋಜಾ ಜಾಧವ

ಗೆಳತಿಯರು

ಎಂತಹ ಸುಂದರ ಕ್ಷಣಗಳು
ಬದುಕಿನ ಬಣ್ಣಗಳು
ಅರೆಕ್ಷಣ ಮರೆತೆ ನೋವುಗಳು
ಗೆಳತಿಯರೊಡನೆ ಆನೆನಪುಗಳು

ವಿದ್ಯಾಗಿರಿಯಲ್ಲಿ ಜೆ ಎಸ್ ಎಸ್ ಕಾಲೇಜಿನಲ್ಲಿ
ಒಂದೆಡಬ್ಬಿಯ ಆ ಊಟದಲ್ಲಿ
ಹಂಚಿತಿಂದ ಅಮ್ರತದ ಸವಿಯಲ್ಲಿ
ತೇಲಿದೆವಿಂದು ನೆನಪಲ್ಲಿ

ಕಳೆದವು ವರುಷಗಳು
ಮರೆತಿಲ್ಲನೆನಪುಗಳು
ರಂಗುರಂಗಿನ ಕನಸುಗಳು
ನನಸಾದ ಕ್ಷಣಗಳು

ಅಜಿತ ಪ್ರಸಾದ ಸರ್ ಮಾತುಗಳು
ಸುಕನ್ಯಾ ಮೇಡಂರ ಪದ್ಯಗಳು
ಶಿವಾನಂದ ಗಾಳಿಸರ್ ಹಾಸ್ಯಗಳು
ಸವಿ ಸವಿ ನೆನಪು ಸಾವಿರ ನೆನಪುಗಳು

ಗ್ಯಾದರಿಂಗನಲ್ಲಿ ಹಾಡಿದ್ದು ಕುಣಿದಿದ್ದು
ಸ್ಪೋರ್ಟ್ಸ್ನಲ್ಲಿ ಭೀಮಕ್ಕನವರ ಸರ್ ಬೈದಿದ್ದು
ಚಂದಾಗಿ ಆಡಿ ಪ್ರೇಜ ತಂದಿದ್ದು
ಗೆಳತಿಯರ ನೋಡಿ ನೆನಪಲಿ ಮಿಂದಿದ್ದು

ಬಳಗ ಬಂಧುಕಿಂತ ಹೆಚ್ಚುಇಂದು
ಸ್ನೇಹ ಸಂಬಂಧ
ಗೆಳತಿಯರ ಕಣ್ಣಲ್ಲಿಂದ
ಜಾರಿತ್ತು ಕಂಬನಿ ಬಿಂದು


ಡಾ.ಸರೋಜಾ ಜಾಧವ

Leave a Reply

Back To Top