ದಾಸಶ್ರೇಷ್ಠ ಭಕ್ತ ಕನಕದಾಸ ವಿಶೇಷ-ಅಮರೇಶ.ಮ.ಗೊರಚಿಕನವರ

ಕನಕ ಜಯಂತಿ ವಿಶೇಷ

ಅಮರೇಶ.ಮ.ಗೊರಚಿಕನವರ

ದಾಸಶ್ರೇಷ್ಠ ಭಕ್ತ ಕನಕದಾಸ-

ಹಾವೇರಿ ಜಿಲ್ಲೆಯ ಬ್ಯಾಡ ಊರು
ಉದಯಿಸಿದರು ಕನಕರೆಂಬ ದಾಸ ಶ್ರೇಷ್ಠರು
ದಾಸ – ದಾಸರಲ್ಲೇ ಶ್ರೇಷ್ಠದಾಸರಿವರು
ಸಮಾಜದ ಒಳಿತಿಗೆ ಅವತಾರ ಪುರುಷನಂತೆ ಧರೆಗಿಳಿದರು

ಬೀರಪ್ಪ ನಾಯಕ ಬಚ್ಚಮ್ಮರ
ಉದರದಲಿ ಜನಿಸಿದಿರು
ತಿರುಪತಿ ತಿಮ್ಮಪ್ಪ ದೇವರ
ಆಶೀರ್ವಾದದ ಸ್ವರೂಪ ಇವರು

ಬಂಕಾಪುರದಲಿ ಅಕ್ಷರಾಭ್ಯಾಸ
ಶ್ರೀನಿವಾಸಚಾರ್ಯರ ಪ್ರಿಯ ಶಿಷ್ಯ
ಆಧ್ಯಾತ್ಮಿಕ ಗುರು ಶ್ರೀ ವ್ಯಾಸರಾಯರು
ಸಾಹಿತ್ಯ ,ತರ್ಕ, ಮೀಮಾಂಸೆಯಲಿ ಚತುರರು

ಯುದ್ದದಲಿ ಗಾಯಗೊಂಡು
ಮೂಡಿತು ವೈರಾಗ್ಯ
ದಂಡನಾಯಕನ ವೃತ್ತಿಗೆ ವಿರಾಮ ನೀಡಿಕೊಂಡು
ದಾಸ ಶ್ರೇಷ್ಠ ದೊರೆತದ್ದು ನಮ್ಮ ಸೌಭಾಗ್ಯ

ಕಾಗಿನೆಲೆ ಆದಿಕೇಶವರಾಯರ
ಪರಮ ಭಕ್ತರು ಕನಕದಾಸರು
ಕಾವ್ಯ ಕೀರ್ತನೆಯ ಹರಿಕಾರರು ಉಗಾಭೋಗ,ಮಂಡಿಗೆ ರಚಿಸಿದರು

ಆರಾಧ್ಯ ದೇವ ಉಡುಪಿಯ ಶ್ರೀಕೃಷ್ಣ
ಪರಮ ಭಕ್ತನಿಗೆ ತೋರಿದ ದಿವ್ಯ ದರುಶನ
ಉಡುಪಿಯ ಮಠದಲ್ಲಿ ಇಂದಿಗೂ ಇದೆ
ಕನಕನ ಕಿಂಡಿ ಎಂದು ಪ್ರಸಿದ್ಧವಾಗಿದೆ

ಜಾತಿಯ ಮದವೇರಿದ ಮನುಜರಿಗೆ ಪಾಠವಾದರು
ಕುಲ-ಕುಲವೆಂದು ಹೊಡೆದಾಡದಿರಿ ಎಂದು ಸಾರಿ ಹೇಳಿದರು
ಕುಲದ ನೆಲೆಯ ಪ್ರಶ್ನಿಸಿದ ಕನಕದಾಸರು
ಜಾತಿ ವ್ಯವಸ್ಥೆಯ ನಿರ್ಮೂಲನೆಯ ಹರಿಕಾರರಾದರು

ಮೋಹನ ತರಂಗಿಣಿ,ನಳ ಚರಿತ್ರೆ
ಹರಿಭಕ್ತಿಸಾರ, ರಾಮಧಾನ್ಯ ಚರಿತೆ
ಹಾಡಿ ಹೊಗಳಿದರು ಮುಗಿಯುವುದಿಲ್ಲ ಕಥೆ
ದಾಸಶ್ರೇಷ್ಠ ಭಕ್ತ ಕನಕದಾಸರ ಮಹಾಕಥೆ

——————–

ಅಮರೇಶ.ಮ.ಗೊರಚಿಕನವರ

Leave a Reply

Back To Top