ಗಂಗಾಧರ ಅವಟೇರ ಕವಿತೆ-ನೀನೇಷ್ಟು ಅಮರ

ಕಾವ್ಯ ಸಂಗಾತಿ

ಗಂಗಾಧರ ಅವಟೇರ

ನೀನೇಷ್ಟು ಅಮರ

ನೆಲದಲಿ ಹುಟ್ಟಿ ನೋಟದಲಿ ಸೆಳೆವ
ಎಲೆ ಮರೆಯಲಿ ಅವಿತು ನಾಚಿ ನಿಂತ ನೀರೆ
ನೀನಾರೆ.
ಬಾಡುವ ಚಾಡು ಅರಿತು ಬೀಗುಮಾನದಿ
ಅರಳಿ,ಮನಸೆಳೆವ ನಗು ಚೆಲ್ಲುವ ಚೆಲುವೆ
ನೀನಾರೆ
ಬಾಳು ಚಣವಾದರೂ ದಾರಿ ಹೋಕರ
ಕಣ್ಣೆಂಜಲಕೆ ತಾಗಿ ರವಿಯ ವಿರಹದುರಿಯಲಿ ಬೆಂದ ಸಖಿ, ನೀನಾರೆ
ಅರ್ಚಕರ ಒಲವಿಂದ ದೇವರ ಮೂಡಿ ಏರಿದಿ
ನಲ್ಲನ ಪ್ರೀತಿಯ ಸೇರೆ ಸಿಕ್ಕು ನಲ್ಲೆಯ ಕೇಶದಲಿ ಕುಳಿತ ನೀನಾರೆ
ಬದುಕು ಕ್ಷಣವಾದರೂ,ಇರುವಷ್ಟು ಕಾಲ
ನಗುವ ನಗುವ ಹೂವೆ ನೀನೇಷ್ಟು ಅಮರ !


ಗಂಗಾಧರ ಅವಟೇರ

.


3 thoughts on “ಗಂಗಾಧರ ಅವಟೇರ ಕವಿತೆ-ನೀನೇಷ್ಟು ಅಮರ

  1. ಕೆಲವೇ ಹೊತ್ತು ಹೂವಾಗಿ ಅರಳಿ ಎಲ್ಲರ ಮನಸನ್ನು ಗೆಲ್ಲುವ ಹೂವಿನಂತೆ ಮನುಜರು ತಮ್ಮ ಬದುಕಿನ ಅವಧಿಯಲ್ಲಿ ಇತರರ ಒಳಿತಿಗೆ ಮೀಸಲಿಟ್ಟರೆ ಜೀವನ ಸಾರ್ಥಕವೆಂಬ ಉದಾತ್ತ ಆಶಯವಿದೆ…ಅಭಿನಂದನೆಗಳು

Leave a Reply

Back To Top