ಡಾ ಸಾವಿತ್ರಿ ಕಮಲಾಪೂರ-ಕನಸುಗಳ ಜಾತ್ರೆ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ-

ಕನಸುಗಳ ಜಾತ್ರೆ

ಅವಳು ಪ್ರೀತಿಸಿದಳು ನನ್ನನ್ನೇ
ನೂರು ನೋವುಗಳ ಮರೆತು
ಅತ್ತಳು ಸೆರಗ ಮರೆಯಲಿ
ಬಿಕ್ಕಿದಳು ನಾ ತೋರುವ
ಹನಿ ಪ್ರೀತಿ ನೆನೆದು

ಹಂಬಲಿಸಿದಳು ಗೋಗರೆದು ಪ್ರೀತಿಗಾಗಿ ಬರಿ ಪ್ರೀತಿಗಾಗಿ
ಇಣುಕಿದೆ ಅವಳ ಹೃದಯಾಳದಲ್ಲಿ ನೋವುಗಳೆಲ್ಲ ಹಾಳು ಬಿದ್ದ ಕೂಪ

ಹರಿಯಿತು ಹನಿ ಬಿಂದು
ಜಿನುಗು ಮಳೆ ಸವಿ ಜೇನ ಹೊಳೆ
ವಿಶಾದ ನೋವು ಮರೆತು ಅಪ್ಪಿದೆ
ತಬ್ಬಿದೆ ಒಪ್ಪಿಕೊಂಡೆ ನನ್ನವಳೆಂದು
ಬರೀ ನನ್ನವಳೆಂದು

ಕಾಣಲೇ ಇಲ್ಲ ಅವಳ ಪ್ರೀತಿ
ಕೊಟ್ಟ ಮನದಲ್ಲಿ ಬಚ್ಚಿಟ್ಟ ನೋವುಗಳನ್ನೆಲ್ಲ ಹೆಕ್ಕಿ ತೆಗೆದೆ ತೆಗಳಿದಳು

ನನ್ನದೇ ಸುಂದರ ಪ್ರೀತಿಗೆ
ನಾ ಹೆಣೆದ ಕನಸು
ಮಾಲೆಯನ್ನು ಬಿಚ್ಚಿ ವಗೆದಳು
ಹರಿದ ಮಾಲೆಯ ಕನಸುಗಳಿಗೆ
ಮತ್ತೆ ಕಟ್ಟಲು ಬಂದಿರುವೆ ನನ್ನವಳಿಗಾಗಿ ಬರೀ ನನ್ನವಳಿಗಾಗಿ

ಮುಗ್ಧ ಮನದ ನನ್ನ ಪೋರಿಗಾಗಿ
ಹುಡುಕುತ್ತಿರುವೆ ಅವಳದೇ ಕನಸುಗಳ ಹಿಮಾಲಯಕ್ಕೆ ಮುಡಿಸುವೆ ಮತ್ತೆ ಅಪ್ಪುವೆ

ಅವಳು ನನ್ನವಳು
ನನ್ನ ನೋವುಗಳನ್ನೆಲ್ಲ
ಮರೆಸಿ ನೊಂದವಳು
ಹಲವು ಕನಸಿಗಾಗಿ ಅತ್ತವಳು ಅವಳು ನನ್ನವಳು

ನನ್ನ ಕನಸುಗಳ ಗೆಳತಿ
ಮತ್ತೆ ಬಂದಿರುವೆ ಬಳಿಗೆ
ಅತ್ತುಬಿಡು ಮತ್ತೊಮ್ಮೆ ಹೋಗೋಣ ಬಾ ನಿನ್ನದೇ ಕನಸುಗಳ ಜಾತ್ರೆಗೆ


ಡಾ ಸಾವಿತ್ರಿ ಕಮಲಾಪೂರ

One thought on “ಡಾ ಸಾವಿತ್ರಿ ಕಮಲಾಪೂರ-ಕನಸುಗಳ ಜಾತ್ರೆ

Leave a Reply

Back To Top