ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ಉಳಿದು ಬಂದರು”

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಉಳಿದು ಬಂದರು”

ಉಳಿದು ಬಂದರು
ಭೂತಳದಲಿ ಹೂತು
ಹೋದ ಯುವಕರು
ಸಾವು ಗೆದ್ದು ಶರಣರಾದರು
ಶ್ರಮಿಕ ವರ್ಗದ
ಯೋಧರು

ನೆಲದ ಕುಸಿತ
ಕಳಚಿ ಬಿದ್ದವು
ದೊಡ್ಡ ದೊಡ್ಡ ಕಲ್ಲು
ಊಟ ವಸತಿ ನೀರಿಲ್ಲ
ಕಳೆದ ಹದಿನೇಳು
ದಿನಗಳು

ಉಸಿರು ಗಟ್ಟಿತು
ಕೊಳವೆ ಗಾಳಿ
ಇಲ್ಲ ಬೆಳಕು ಬಿಸಿಲು
ಜೀವ ಸುತ್ತ ಕವಿದ ಕತ್ತಲು
ಹಾವು ಚೇಳು ಮೈ ಮುತ್ತಲು
ಬದುಕುವ ಛಲ ಹೊತ್ತರು

ಯಾವ ದೇವರ ಕರುಣೆ ಕಾಣೆ
ಮತ್ತೆ ಮರಳಿ ಬಂದರು
ದುಡಿವ ಕೈಗೆ ಕನಸು ಕಂಕಣ
ಮೆಟ್ಟಿ ನಿಂತರು ಮರಣ
ಶೋಕ ಗೀತೆ ಮರೆತ ಚಾರಣ

ಸ್ನೇಹ ಪ್ರೀತಿ ಸಮತೆ ಕಾರಣ


ಉತ್ತರಾಖಂಡದಲ್ಲಿ 17 ದಿನಗಳಿಂದ 41 ಜನ ಯುವಕರು ಕಾರ್ಮಿಕರು. ಭೂಮಿಯ ಕೆಳಗಿನ ಟನಲ ಕೆಲಸದಲ್ಲಿ ಹೂತು ಹೋಗಿದ್ದರು
ನಿರಂತರ ಹುಡುಕಾಟ ಮತ್ತು ಪ್ರಯತ್ನದಿಂದ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ ನಡೆಸಿ ಉತ್ತಮ ಬಾಂಧವ್ಯ ಹೆಣೆದ ವಿಜ್ಞಾನಿಗಳಿಗೆ ಭೂಗರ್ಭ ಶಾಸ್ತ್ರಜ್ಞರಿಗೆ ನಮ್ಮಯೋಧರಿಗೆ ಅನಂತ ಶರಣು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ “ಉಳಿದು ಬಂದರು”

  1. ಬಸವಣ್ಣ ಕಾಪಾಡಲಿ ಬದುಕಿ ಬಂದರು. ಪುಣ್ಯವಂತರು,

    ಅಕ್ಕಮಹಾದೇವಿ

  2. ಪ್ರಸ್ತುತ ಸನ್ನಿವೇಶಕ್ಕೆ ಸ್ಪಂದಿಸುವ ಕವನ ಚೆನ್ನಾಗಿದೆ ಸರ್ ಧನ್ಯವಾದಗಳು

  3. ಉಳಿದು ಬಂದರು…
    ಮೆಟ್ಟಿ ನಿಂತರು ಮರಣ…. ಹೌದು..
    ದೇವರ ಕರುಣೆ
    ಮನ ಮುಟ್ಟುವ ಕವನ

    ಸುಶಿ

Leave a Reply

Back To Top