ಕಾವ್ಯ ಸಂಗಾತಿ
ಡಾ ಮೀನಾಕ್ಷಿ ಪಾಟೀಲ್
ಮನಸು
ಕಾಡದಿರು ಮನಸೆ
ಕಾಡುವ ನನ್ನೊಳಗಿನ ನೀನು
ನಾನಾಗುವ ಬಯಕೆ
ನೀನು ನೀನಾಗಿರುವ ತನಕ
ಕನಸಾಗು ಭಾವವಾಗು
ಬದುಕಾಗು ಬಣ್ಣದ
ಚಿತ್ತಾರವಾಗು
ನನ್ನಂತೆ ನೀ ರೂಪವಾದಾಗ
ವಿರೂಪದ ಭಯ
ನಿನ್ನೊಳಗೆ ಕಾಡುತ್ತದೆ
ಬಣ್ಣ ಬದುಕು
ಚಿತ್ತಾರ ಕನಸುಗಳು
ಭಗ್ನಗೊಂಡು
ಬಣ್ಣ ಬಯಲಾಗುತ್ತದೆ
ಚಿತ್ತಾರ ರೂಹಗೆಡುತ್ತದೆ
ಬದುಕು ಬರಡಾಗುತ್ತದೆ
ಭಾವ ಕಳಚುತ್ತದೆ
ಮನಸು ಕನಸಾಗಿ ಕಾಡುತ್ತದೆ
ಡಾ ಮೀನಾಕ್ಷಿ ಪಾಟೀಲ್
ಕಾಡದಿರು ಮನಸೆ ಕವಿತೆ ತುಂಬಾ ಚೆನ್ನಾಗಿದೆ. ಓದಿದೆ ಸಂತೋಷವಾಯಿತು. ಎಂ. ಬಿ. ಸಂತೋಷ್, ಮೈಸೂರು.
ಕಾಡುವ ಮನಸನು … ಕಾಡಬೇಡ ಎಂದು ಹೇಳುವ ರೀತಿ ಇಷ್ಟವಾಯ್ತು
ಸುಶಿ