ಕಾವ್ಯ ಸಂಗಾತಿ
ನಾಗರತ್ನ ಎಚ್ ಗಂಗಾವತಿ
ಮಾಯಾ ಲೋಕ
ಜಗವೊಂದು ನಾಟಕ ರಂಗ
ತಿಳಿದು ಮಾಡಬೇಕು ಕೆಲವರ ಸಂಘ
ಇರದಿದ್ದರೆ ಬಾಳೊಂದು ಚದುರಂಗ.
ಬಣ್ಣದ ಲೋಕದಲ್ಲಿ ಇಹರು ನಾನಾರೀತಿಯ ಜನರು ಅರಿತು ಬಾಳಿದರೆ ಸ್ವರ್ಗ ಸುಖ.
ಎಲ್ಲರ ಬಾಳಲಿ ಇರುವುದು ಕಷ್ಟವೂ
ಸಮಯ ಬಂದಾಗ ತಿಳಿಯುವುದು ಜೀವನ ಮೌಲ್ಯವು.
ಯಾರ ನಂಬಿ ಕೂರ ಬೇಡ
ನಿನ್ನತನ ಮರೆಯಬೇಡ
ಮಾಡಬೇಡ ಯಾರ ಮೇಲೂ ಸೇಡ.
ಭಗವಂತನ ನಂಬಿ ಜೀವನ ಸಾಗಿಸು
ಅದುವೇ ನಿನ್ನ ಜೀವನಕ್ಕೆ ಬೆಳಕು
ಬೇಡ ನಿನಗೆ ಮಾಯಾಲೋಕದ ಬದುಕು.
ನಾಗರತ್ನ ಎಚ್ ಗಂಗಾವತಿ