ಕಾವ್ಯ ಸಂಗಾತಿ
ಸುಧಾ ಪಾಟೀಲ
ಇದ್ದೂ ಇಲ್ಲದ0ತೆ
ಪ್ರತಿದಿನದ ಮನದ
ಕಲ್ಮಶಗಳ ತೊಳೆಯದೆ
ಹೊಣೆಗಾರಿಕೆಯಿಂದ
ನುಣುಚಿಕೊಂಡು
ಬಾಹ್ಯಾಡಂಬರಕ್ಕೆ
ಮರುಳಾಗಿ
ಅನವರತ ಇದ್ದೂ
ಇಲ್ಲದ0ತಾಗಿದ್ದೇವೆ
ರಣಹೇಡಿಯ ಹಾಗೆ
ಪ್ರತಿಭಟಿಸದೆ
ತಿರುಗಿಬೀಳದೆ
ವ್ಯವಸ್ಥೆಯನ್ನು ಖಂಡಿಸದೆ
ಸತ್ಯವನ್ನು ಹೊರಗೆಡವದೆ
ಇದ್ದೂ ಇಲ್ಲದಂತಾಗಿದ್ದೇವೆ
ಹೊಗಳುಭಟ್ಟರ ಸುತ್ತ
ಮುತ್ತ ಗಿರಕಿ ಹೊಡೆಯುತ್ತ
ನಮ್ಮನ್ನು ನಾವು
ಮರೆತಿದ್ದೇವೆ
ನಮ್ಮ ಅಸ್ತಿತ್ವವನ್ನು
ತ್ಯಜಿಸಿದ್ದೇವೆ
ಹಗಲಿರುಳು ಹುಸಿ
ಸ್ಪರ್ಧೆಯ ಒಡ್ದುತ್ತಾ
ಇದ್ದೂ ಇಲ್ಲದ0ತಾಗಿದ್ದೇವೆ
ಸೋಗುಲಾಡಿಗಳ ನಡುವೆ
ಮರೆತಿದ್ದೇವೆ
ನಿಜವಾದ ಜೀವನದ ಉದ್ದೇಶವನು
ಹಿಂಜರಿಕೆಯ ನೆಪದಲ್ಲಿ
ಅಧೈರ್ಯದ
ಕೂಪಗಳಾಗಿದ್ದೇವೆ
ಊಹಾಪೂಹಗಳಿಗೆ
ನಿಲುಕಿ
ಇದ್ದೂ ಇಲ್ಲದಂತಾಗಿದ್ದೇವೆ
ಭಂಡರ ನಡುವೆ
ತಲೆಎತ್ತಿ ನಡೆದು
ಅಭಿಪ್ರಾಯಗಳ
ಮಂಡಿಸುವದ ಬಿಟ್ಟಿದ್ದೇವೆ
ವಿಜಯದ ಪತಾಕೆಯನ್ನು
ಹಾರಿಸುವಲ್ಲಿ
ಹಿಂದು ಮುಂದು ನೋಡುತ್ತಾ
ಇದ್ದೂ ಇಲ್ಲದ0ತಾಗಿದ್ದೇವೆ
ಶರಣರ ತತ್ವವನ್ನು
ಗಟ್ಟಿಸಿ ಹೇಳುವಲ್ಲಿ
ಅದೇ ನಮ್ಮ ಅಸ್ತಿತ್ವ
ಎಂದು ಸಾರುವಲ್ಲಿ
ವಿಚಾರಮಾಡುತ್ತಿದ್ದೇವೆ
ವಚನಗಳೇ ನಮ್ಮ
ಮೂಲಭೂತ ಜೀವನದ
ತಿರುಳು ಎಂದು
ತಿಳಿಸಿಹೇಳದೆ
ಇದ್ದೂ ಇಲ್ಲದಂತಾಗಿದ್ದೇವೆ
ಸುಧಾ ಪಾಟೀಲ್
ಕವಯತ್ರಿ
ಬೆಳಗಾವಿ
ಸುಂದರ ಕವಿತೆ
ಅತ್ಯಂತ ಸುಂದರ ಕವನ
Excellent
ಅರ್ಥ ಪೂರ್ಣ ಕವನ ಗೆಳತಿ ಹೀಗೆ ಇರಲಿ ನಿಮ್ಮ ಕಾವ್ಯ ಪ್ರೌಢಿಮೆ
ದೀಪಾ
ಏಷ್ಟು ಚೆಂದ ಮೂಡಿ ಬಂದಿದೆ ಕವನ ನಿಮ್ಮ ಈ ವರ್ಷಗಳ ಕವನ ಕಾರಂಜಿ ಅದ್ಭುತ ಅಗಾಧ