ಮೀನಾಕ್ಷಿ ಸೂಡಿಕವಿತೆ- ಹೃದಯದ ಆರಾಧನೆ

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ಹೃದಯದ ಆರಾಧನೆ

ಗೆಳೆಯ ನಿನ್ನ ರೂಪ
ತುಂಬಿಕೊಂಡಿರಬಹುದು ಕಣ್ಣಲ್ಲಿ ಕೆಲವರು
ಹೃದಯದೊಳು ತುಂಬಿಕೊಂಡು
ಆರಾಧಿಸುವವರಿಲ್ಲ ನನ್ನಂತೆ ಯಾರು…

ನಿನ್ನಂದ ಚೆಂದದ ಮಾತು
ಆಸ್ವಾಧಿಸುವವರು
ಸಾಲು ಸಾಲು
ಸಾಧ್ಯವೇ ಇಲ್ಲ ಯಾರಿಗೂ
ಅನುದಿನ ಅನುಕ್ಷಣ
ನನ್ನಂತೆ ಆರಾಧಿಸಲು

ಗೆಳೆಯ ನಿನಗೆ ಜೊತೆ
ನೀಡುವ ಚಲುವೆಯರು
ಇರಬಹುದು ಸಾವಿರಾರು
ಆದರೆ ನನ್ನಂತೆ ಪ್ರೀತಿಸಿ
ಆದರಸಿ ಅರ್ಪಿಸಿಕೊಳ್ಳುವರು
ಇಲ್ಲ ಯಾರು

ನಿನ್ನ ಕಾಮ ಕಾವ್ಯಗಳ
ವರ್ಣಿಸಿ ಬಳಿ ಬರಬಹುದು
ಸಾವಿರ ಚಲುವೆಯರು
ಆದರೆ
ನನ್ನಂತೆ ಸದಾ ಕಾಮದಾಚೆಗೂ
ನಿನ್ನ ಬಯಸಿ ಆರಾಧಿಸುವವರು
ಇಲ್ಲ ಯಾರೂ…
ಇಲ್ಲವೇ ಇಲ್ಲ ಯಾರೂ…


ಮೀನಾಕ್ಷಿ ಸೂಡಿ

Leave a Reply

Back To Top