ಲೇಖನ ಸಂಗಾತಿ
ಡಾ.ಕಸ್ತೂರಿ ದಳವಾಯಿ
ಲೋಕದಲಿ ಹುಟ್ಟಿದ ಬಳಿಕ
ಬೆಟ್ಟದಾಮೇಲೂಂದು ಮನೆಯ ಮಾಡಿರುವೆ ಆ ಬೆಟ್ಟ ಬೆಳದಿಂಗಳಲ್ಲಿ.ಬೆಳಕು.ಮುಂಜಾವು.ಮದ್ಯಾನ್ಹ.ಸಂಧ್ಯಾ ಕಾಲ.ರಾತ್ರಿ.. ಕ್ಷಣ ನಿಮಿಷ ತಾಸು ದಿನ ವಾರ ತಿಂಗಳ.ಸವಂತ್ಸರ.ಯುಗ ಹೇಗೆ ಬರುವುವು ಹೋಗುವುವು ಆಗ ಇದರಡಲ್ಲಿಯ ಸುಖ ನೆಮ್ಮದಿ ದುಃಖ ರೋಗ ಸಹಜ ಲಕ್ಷಣಗಳು ಬಂದು ಬಳಗ ಕುಟುಂಬದ ಸದಸ್ಯರು ಮಕ್ಕಳು ಪತಿ.ಪತ್ನಿ. ಸ್ನೇಹಿತರು ಆತ್ಮೀಯ ರು.. ಸಮಾಜದ ಸಂಕುಲ..ಗಿಡ ಮರ.ಬಳ್ಳಿ.ಹೂ.ಹಣ್ಣು.ಕಾಡು ಮೇಡು ಮೃಗ. ಖಗ ಪಕ್ಷಿ .ಕೀಟ ಕ್ರಿಮಿ.ಗಳಲ್ಲಾ ಜೊತೆಗೆ ನದ.ನದಿ ಸಮುದ್ರ.ಸುತ್ತೆಲ್ಲಾ ಸುತ್ತಿಕೊಂಡು ಪರಿಸರ ಪರಿಣಾಮ ಒಟ್ಟಾರೆ ಜೊತೆ ಯಾಗಿ ಬದುಕುವಲ್ಲಿ ಏನೆಲ್ಲಾ ನಿಂದೆ ಹೊಗಳಿಕೆ. ತೆಗಳಿಕೆ ಬರಬಹುದು ಅಗ ಎಲೆ?ಜೀವವೆ ನೀನು ಬಹಳ ಸಮಾಧಾನಿಯಾಗಿರಬೇಕು.~ಇಲ್ಲಾವದಲ್ಲಿ ಹೃ್ದಯ ಸ್ತಂಭನ ವಾಗುವುದು ಅಂದರೆ ಹೃ್ದಯಾಘಾತ.ಹಾಗಾಗಿ ನೀಡುವ ಪ್ರತಿಯೊಂದು ಹೆಜ್ಜೆಯು ಮುಳ್ಳು ಹೂವಿನಿಂದ ಕೂಡಿದೆ .ಅದಾಗ್ಯೂ ಹೂ ಕೆಳಗೆ ಮುಳ್ಳು ಇರುವದರಿಂದ ಹೂ ಸುರಕ್ಷಿತಯೆಂದು ತಿಳಿ ಹೀಗಿದ್ದು ಸಮ ಸಮಾಜದ ಬೆಟ್ಟದ ಮೇಲೆ ಮನೆಯ ಮಾಡಿ ಮೃ್ಗಗಳಿಗೆ ಅಂಜಬೇಡವೆಂದು.ಸಮದ್ರದ ತಟದಲ್ಲಿ ಮನೆಯ ಮಾಡಿ ನಿಸರ್ಗ ಸಹಜವಾಗಿರು ನೆರೆ.ತರೆಗಳಿಗೆ ಅಂಜ ಬೇಡಾ.ಮನುಷ್ಯ ಜೀವವೆ ಮತ್ತು ಸಂತೆಯೂಳಗೂಂದು ಮನೆಯ ಮಾಡಿ ಶಬ್ದಕ್ಕೆ ನಾಚಬೇಡಾ ಗಟ್ಟಯಾಗಿ ನಿಲ್ಲವ ಮೆಟ್ಟಿ ನಿಲ್ಲುವ.ಎದೆಗಾರಿಕೆ ನಿನ್ನದಾಗಲೆಂದು…ಶರಣರು.ಮಾನವೀಯ ಮಾಲ್ಯಗಳನ್ನು ಮನುಷ್ಯ ಬಾಳ್ವೆಯ ಬದುಕಿನ ಹೊಲದಲ್ಲಿ ಬಿತ್ತನೆ ಮಾಡಿದ್ದಾರೆ ಹಾಗಾಗಿ ಆ ಹುಲುಸಾದ ಹಸನಾದ ಬೆಳಗೆ ನಾವೆ ಮಾಲಿಕರಲ್ಲವೆ………
.ಸಮೃದ್ಧ ವಾಗಿ ಫಸಲು ಕೂಡೋಣವೆಂದು ಹೇಳುತ್ತಾ.ಸಮಾಧಾನ ಚಿತ್ತದಿಂದ …~ಉಸುರೋಣ.~~~
ಡಾ.ಕಸ್ತೂರಿ ದಳವಾಯಿ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ ಕಾಲೇಜು ಗದಗ.