ಕಾವ್ಯ ಸಂಗಾತಿ
ಮಮತಾ ಕೆ
ಹಕ್ಕಿ ಗೂಡು
ನೇಯಬೇಕು ಗೂಡುಕಟ್ಟಬೇಕು
ಬದುಕಿನ ಸೂತ್ರದೊಳಗೆ
ಲೆಕ್ಕಾಚಾರದ ಪರಿಧಿಯೊಳಗೆ
ರೆಕ್ಕೆ ಬಡಿದು ದೂರದ ಪಯಣ
ಕೊಕ್ಕಿನ ತುದಿಯಲ್ಲಿ ನಾರುಕಡ್ಡಿ
ಗೂಡು ಗಟ್ಟಿಯಾಗಿರಲು
ಚಿತ್ರವಿಚಿತ್ರ ಆಕಾರ ನೀಟಾಗಿ ಹೆಣೆಯುತ್ತಾ
ಪ್ರೀತಿ ತುಂಬಿದ ಮನೆಯಲ್ಲಿ
ಮಳೆ ಗಾಳಿಗೆ ಜೋಪಾನವಾಗಿರಲು..
ಪ್ರಕೃತಿಯ ವಿಕೋಪದ ಗೊಡವೆಯಿಲ್ಲ
ಆದರೂ ಕಟ್ಟುವುದೇ ಕಾಯಕ
ಈ ಕ್ಷಣ ಸುಖವಾಗಿರಲು ಪೊರೆಯಲು
ಗೂಡು ಕಟ್ಟಿದ ಮರ
ಉರುಳಿ ಧರೆಗೆ ಉರುಳಿತು
ಪ್ರೀತಿಯಲ್ಲಿ ಕಟ್ಟಿದ ಗೂಡು ಛಿದ್ರವಾಯಿತು
ಹಕ್ಕಿಯ ರೋಧನ ಕೇಳುವವರಿಲ್ಲ
ಮತ್ತೆ ಹೊಸ ಮರದ ಹುಡುಕಾಟ
ನೇಯಬೇಕು ಮತ್ತೆ ಕಟ್ಟಬೇಕು
ಬದುಕು ಕೂಡ ಇಷ್ಟೇ
ಒಳಿತು ಕೆಡುಕುಗಳ ಮಧ್ಯೆ
ಪ್ರಕೃತಿಯೊಂದಿಗೆ ಮನಸ್ಸುಗಳೊಂದಿಗೆ..
ಗೂಡು ಕಟ್ಟುವ ಹಕ್ಕಿಯಂತೆ
ಮತ್ತೆ ಬದುಕ ಕಟ್ಟಬೇಕು ಬೆಳೆಯಬೇಕು
ಪ್ರೀತಿಯಿಂದಲೇ ಬದುಕಬೇಕು.
ಮಮತಾ ಕೆ
.
ಸುಂದರ
ಸುಂದರ ಹಕ್ಕಿ ಗೂಡಿನ ಕವನ
ಕವಿತೆ ಚೆನ್ನಾಗಿದೆ ಮಮತರವರೆ