ಗೀತಾ ಕೇಶವ್ ಭಟ್-ತವರೂರ ದಾರಿ

ಕಾವ್ಯ ಸಂಗಾತಿ

ಗೀತಾ ಕೇಶವ್ ಭಟ್

ತವರೂರ ದಾರಿ

ತವರು ಮನೆ ಹಾದಿಯಲಿ
ಸವೆಯಲಾರದು ಪಾದ
ಭವದ ಜಂಜಡ ಮರೆಸುವಂಥ ಪಯಣ
ಸವಿ ನೆನಪುಗಳ ಬುತ್ತಿ
ಸವಿದು ಹುಡುಕುವೆನಿಲ್ಲಿ
ಭುವನದಲಿ ಸಗ್ಗವನು ತಂದವರನು

ಅಡಿ ತಿದ್ದಿ ನುಡಿ ತಿದ್ದಿ
ನಡಿಗೆ ಕಲಿತಿಹ ನೆನಪು
ನಡೆದ ಹಾದಿಯಲಿಟ್ಟ ಹೆಜ್ಜೆ ಗುರುತು
ಎಡಬಿಡದೆ ಕಾಡುವದು
ನುಡಿಗೆ ಸಿಲುಕದ ಭಾವ
ಬಿಡಿಸಲಾಗದ ಬಂಧ ತವರ ನಂಟು

ಉಸಿರಾಡುತಿದೆ ನೆನಪು
ಹಸಿರು ಹಂದರವಾಗಿ
ಬೆಸೆದು ತವರೆಂಬ ಹೆಮ್ಮರವ ಬಳಸಿ ಬಿಸಿಲು ತಾಗದ ಹಾದಿ
ಟಿಸಿಲೊಡೆಯದಿಹ ಹಾದಿ
ಕುಸಿದಾಗ ದಣಿದು ಕೈ ಹಿಡಿವ ಹಾದಿ


ಗೀತಾ ಕೇಶವ್ ಭಟ್

One thought on “ಗೀತಾ ಕೇಶವ್ ಭಟ್-ತವರೂರ ದಾರಿ

  1. ನನ್ನ ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು

Leave a Reply

Back To Top