ಸುರೇಶ ತಂಗೋಡ ಕವಿತೆ-ಯುದ್ಧಭೂಮಿ

ಕಾವ್ಯ ಸಂಗಾತಿ

ಸುರೇಶ ತಂಗೋಡ

ಯುದ್ಧಭೂಮಿ

ಇಲ್ಲಿನ ಮಣ್ಣ ಕಣದಲ್ಲಿ
ರಕ್ತ ಮಡುಗಟ್ಟಿದೆ
ಅಹಿಂಸೆಯನ್ನು ಮುಚ್ವಿ‌ಹಾಕಲಾಗಿದೆ
ಶಾಂತಿಯನ್ನು ವಿವಸ್ತ್ರಗೊಳಿಸಲಾಗಿದೆ
ಕ್ರೌರ್ಯತೆಯನ್ನು ಕಿರಿಟ ತೊಡಿಸಿ
ಸಿಂಹಾಸನದಲ್ಲಿ ಕೂರಿಸಲಾಗಿದೆ.

ಶಕ್ತಿ-ನಿಶಕ್ತಿಗಳು ಮಾತ್ರ ಮುಖ್ಯ
ಉಳಿದೆಲ್ಲವೂ ಅಮುಖ್ಯ
ಮಾನವೀಯತೆಗಿಲ್ಲಿ ಬೆಲೆಯಿಲ್ಲ
ಸಾವು ನೀರ ಮೇಲಿನ ಗುಳ್ಳಿ
ಆಕ್ರಮಣ ಸ್ವಾಭಾವಿಕ ಗುಣ
ಬಲಿದಾನ ಇಲಿ ಸರ್ವೆ ಸಾಮಾನ್ಯ.

ಅಲ್ಲಿ ಮಾತುಗಳಿಲ್ಲ
ಬರೀ ಮಾರಕಾಸ್ತ್ರಗಳದ್ದೇ ಸದ್ದು.
ತುಪಾಕಿಗಳು ಆಟಿಕೆಯ ವಸ್ತುಗಳಂತೆ
ಜೀವಗಳನ್ನು ಜರ್ಜರಿತ ಮಾಡಿ ಹೊಸಕುವರು
ಆತಂಕ ಮನೆ ಮಾಡಿದೆ ಇಲ್ಲಿ
ಯುದ್ಧ ಮುಗಿಯುವುದೆಂಬ ಭರವಸೆಯಿಲ್ಲ.

ಕದನವನ್ನೇ ಕಂಡ ಕೂಸಿಗೆ
ಶಾಂತಿಯೆಂದರೆ ಅರ್ಥವಾದೀತೆ
ಜಾತಿ ,ನೆಲದ ಹೆಸರಿಗಾಗಿ
ಪ್ರಾಣ ಹತ್ಯೆದ ಆದರ್ಶ ಮಗುವನ್ನು
ಸ್ವಾಸ್ಥ್ಯ ವ್ಯಕ್ತಿಯಾಗಿ
ನಿರ್ಮಾಣ ಮಾಡುವುದೇ?…..

ಮರುಕಳಿಸದಿರಲಿ ಯುದ್ಧ
ಸ್ನೇಹ-ಸೌಹಾರ್ಧದಿಂದ
ಬದುಕೋಣ
ನೆಮ್ಮದಿಯ ಬದುಕನ್ನು ಮಕ್ಕಳಿಗೆ
ತಿಳಿ ಹೇಳಿ ಅದರಂತೆ
ನಾವು ನೀವು ಆಗಿ……

—————————————-

ಸುರೇಶ ತಂಗೋಡ

2 thoughts on “ಸುರೇಶ ತಂಗೋಡ ಕವಿತೆ-ಯುದ್ಧಭೂಮಿ

Leave a Reply

Back To Top