ಇಂದಿರಾ ಮೋಟೆಬೆನ್ನೂರ ಕವಿತೆ ಆರದಿರಲಿ ದೀಪ

ಕಾವ್ಯಸಂಗಾತಿ

ಇಂದಿರಾ ಮೋಟೆಬೆನ್ನೂರ ಕವಿತೆ ಆರದಿರಲಿ ದೀಪ

ಹಾದಿ ಬೀದಿಯ ಇಕ್ಕೆಲಗಳಲ್ಲಿ
ಹಣತೆ ಹಚ್ಚಿ ಹುಡುಕುತ್ತಿರುವೆ…
ನೀ ಹಚ್ಚಿಟ್ಟ ಸ್ನೇಹ ಪ್ರೀತಿಯ
ದೀಪ ಸಾಲುಗಳನ್ನು…..

ನೀ ಬಿಚ್ಚಿಟ್ಟ ಮಮತೆ ಸಮತೆಯ
ಬೆಳಕ ಭಾವಗಳನ್ನು….
ನೀ ತೆರೆದಿಟ್ಟ ಒಲವು ಚೆಲುವಿನ
ಪುಟ ಪುಟಗಳನ್ನು……

ನೀ ಮುಡಿಸಿಟ್ಟ ಜೀವ ಪರಿಮಳ
ಅದಮ್ಯ ಚೇತನವನ್ನು….
ಎಲ್ಲರೆದೆಯಲಿ ಬಿತ್ತಿದ
ಬಸವ ಬುದ್ಧರ ತತ್ವಗಳನ್ನು….

ನೀ ಕೆತ್ತಿದ ಶಾಂತಿ ಸೌಹಾರ್ದದ
ಚಿತ್ರ ಪ್ರಣತೆಗಳನ್ನು….
ನೀ ಮುಡಿಸಿದ ದಿವ್ಯ ಬೆಳಕನ್ನು
ಆರದಿರಲಿ ದೀಪಗಳು….

ನೀ ಮುಡಿಸಿದ ಮಾನವತೆಯ
ಜ್ಯೋತಿಗಳು…
ಹೊಯ್ದಾಡದಿರಲಿ ದ್ವೇಷದ
ಬಿರುಗಾಳಿ ಬೀಸಿಗೆ….

ಎಲ್ಲೆಡೆಯೂ ಚಿರಕಾಲ ಬೆಳಗಲಿ
ಮನ ಮನೆಗಳಲ್ಲಿ…
ನೀ ಬರೆದಿಟ್ಟ ಕವಿತೆಯ ಸಾಲುಗಳು
ಆರದಿರಲಿ ದೀಪಗಳು….


-ಇಂದಿರಾ ಮೋಟೆಬೆನ್ನೂರ.

Leave a Reply

Back To Top