ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ ಕವಿತೆ – ಸಂತಸದ ದೀಪಾವಳಿ

ಕಾವ್ಯ ಸಂಗಾತಿ

ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ

ಸಂತಸದ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ
ಕತ್ತಲೆ ಅಳಿಸುವ ಹಬ್ಬವಾಗಲಿ
ಭೇದ ಭಾವ ಎಂಬುದು ಮರೆಯಾಗಲಿ
ದೀಪಗಳ ಹಬ್ಬ ಈ ದೀಪಾವಳಿ

ಮಕ್ಕಳಿಗೆಲ್ಲ ಪಟಾಕಿಗಳ ಹಾವಳಿ
ಮನೆ ಅಂಗಳದಲ್ಲಿ ರಂಗೋಲಿ ಬಣ್ಣಗಳ ಹೋಳಿ
ಎಲ್ಲರೂ ಒಗ್ಗೂಡಿ ಸಿಹಿ ಸವಿಯಲಿ
ದೀಪಗಳ ಹಬ್ಬ ಈ ದೀಪಾವಳಿ

ಮನಗಳ ಮನಸ್ತಾಪ ದೂರವಾಗಲಿ
ಸುಖ ಸಂತೋಷ ಎಲ್ಲರಲ್ಲೂ ನೆಲೆಸಲಿ
ಪ್ರತಿಯೊಬ್ಬರಲ್ಲೂ ಪ್ರೀತಿಯ ಜ್ಯೋತಿ ಬೆಳಗಲಿ
ದೀಪಗಳ ಹಬ್ಬ ಈ ದೀಪಾವಳಿ

ಎಲ್ಲರ ಮನೆ ಸಂಪತ್ತಿನಿಂದ ತುಂಬಿರಲಿ
ಕಷ್ಟಕಾರ್ಪಣ್ಯಗಳು ಇಂದೇ ಕೊನೆಯಾಗಲಿ
ಹೊಸತನದ ಹೊಂಬಣ್ಣ ಎಲ್ಲರಲ್ಲೂ ಚಿಗುರಲಿ
ದೀಪಗಳ ಹಬ್ಬ ಈ ದೀಪಾವಳಿ

ಎಲ್ಲರ ಆಸೆ ಕನಸುಗಳು ನನಸಾಗಲಿ
ಪ್ರೀತಿ ಪ್ರೇಮದ ನಂಟು ಬಿಗಿಯಾಗಲಿ
ಅಹಂ ಅಳಿಸಲಿ ಸ್ನೇಹದ ಬಾಂಧವ್ಯ ಗಟ್ಟಿಯಾಗಲಿ
ಲಕ್ಷ್ಮೀದೇವಿ ಎಲ್ಲರ ಮನೆ ಮನಗಳನ್ನು ಹರಸಲಿ
ದೀಪಗಳ ಹಬ್ಬ ಈ ದೀಪಾವಳಿ

ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ

4 thoughts on “ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ ಕವಿತೆ – ಸಂತಸದ ದೀಪಾವಳಿ

  1. From:V.H.Sambrani
    Super, very nice,
    Deepawali festival is written in a meaningful language. Congratulations
    Mahalakshmi.

Leave a Reply

Back To Top