ಮಕ್ಕಳ ದಿನಾಚರಣೆ ವಿಶೇಷ

ಮುತ್ತು ಬಳ್ಳಾ ಕಮತಪುರ

ನಾಡಿನ ಮಕ್ಕಳು

ಮಕ್ಕಳು ನಮಗೆ ದೇವರು
ಅರಳು ಹೂವಿನ ಮಂದಾರ
ಮಮತೆ ತುಂಬಿದ ಚಂದಿರ
ಮನೆಯ ಮಂದಿ ಸಾವುಕಾರ

ಸ್ವರ್ಗವು ಧರೆಗೆ ತಂದವರು
ಚುಕ್ಕಿಯ ಎಣಿಸಿ ನಕ್ಕವರು
ಮಾತಿನ ಮೋಡಿ ನಗೆಗಾರ
ಚಂದದ ಬೆಳಕಿನ ಸರದಾರ

ಮುದ್ದಿಲೆ ಮುತ್ತು ಕೊಟ್ಟಾಗ
ಬಾಳಿನ ಆಯಾಸ ಕಳೆದಾಗ
ಚಿಂತೆಯ ಚಿತೆಯು ಬಲುದೂರ
ಆಯುಷ್ ಗುಟ್ಟು ಮಿತಾಹಾರ

ರನ್ನ ಚಿನ್ನ ಮನೆಯೆಲ್ಲ
ನಾಳಿನ ಹುಚ್ಚು ಅವರಿಗಿಲ್ಲ
ಇಂದಿನ ದಿನವೆ ನಮಗೆಲ್ಲ
ಉಳಿಕೆ ಗಳಿಕೆ ಬೇಕಾಗಿಲ್ಲ

ನಾಡಿನ ಮಕ್ಕಳು ನಾವೆಲ್ಲಾ
ಬದುಕಲು ಬೇಕು ಬೆಂಬಲ
ನಿಮ್ಮಯ ಪ್ರೀತಿ ಸೋಪಾನ
ಭವ್ಯ ಭವಿಷ್ಯದ ಆಶಾಕಿರಣ


ಮುತ್ತು ಬಳ್ಳಾ ಕಮತಪುರ

One thought on “ಮಕ್ಕಳ ದಿನಾಚರಣೆ ವಿಶೇಷ

Leave a Reply

Back To Top