ಅಭಿಜ್ಞಾ ಪಿ.ಎಮ್.ಗೌಡ
ಮುದ್ದು ಮಕ್ಕಳೆ
ದೇಶ ಬೆಳಗುವ ಮುದ್ದು ಮಕ್ಕಳೆ
ನಿಮ್ಮ ಸಾಧನೆ ಸಾಗಲಿ
ಜ್ಞಾನ ದೀಪದ ಪ್ರಭೆಯು ಹೆಚ್ಚುತ
ಸದ್ಗುಣ ಸಂಸ್ಕೃತಿ ಬೆಳೆಯಲಿ…
ನೀತಿ ನಿಯಮವ ಎತ್ತಿ ಹಿಡಿಯುತ
ಸತ್ವ ಮೌಲ್ಯವ ಅರಿಯಿರಿ
ಸ್ವಾರ್ಥತೋರದೆ ನಿಸ್ವಾರ್ಥದೊಳಗೆ
ತಥ್ಯ ಪಥವನೆ ತುಳಿಯಿರಿ…..
ಗುರು ಹಿರಿಯರ ಮಾತ ಕೇಳುತ
ಸನ್ಮತದೊಂದಿಗೆ ನಡೆಯಿರಿ
ಭಕ್ತಿ ಯುಕ್ತಿಯ ತೋರಿ ಸಾಗುತ
ಸದ್ಧರ್ಮದೊಳಗೆ ಸಾಗಿರಿ…
ನಿತ್ಯ ಸದಮಲದಲ್ಲೆ ಪೂಜಿಸಿ
ಅಪ್ಪ ಅಮ್ಮನ ಮೆರೆಸಿರಿ
ಸದ್ಭಾವಗಳನು ಬೆಳೆಸಿಕೊಳ್ಳುತ
ಸತ್ಯಾರ್ಥದಲ್ಲೆ ನಡೆಯಿರಿ..
ಸತ್ಯಸಂಧರು ದಿಟ್ಟ ವೀರರು
ಚರಿತಾರ್ಥವನ್ನೆ ಸೃಷ್ಟಿಸಿ
ಅಕ್ಷರದಗಳನು ಚಾಚುತಪ್ಪದೆ
ಮಸ್ತಕದೊಳಗಣ ಕೂರಿಸಿ..
ನಿತ್ಯ ಕಲಿಯುತ ವಿಬುಧರಾಗುತ
ಕಲಿಸಿದಾತರ ನೆನೆಯಿರಿ
ದಕ್ಷರಾಗುತ ನಿಷ್ಟೆ ಮೆರೆಯುತ
ಶಿಕ್ಷಣ ಶಿಖರವೇರಿರಿ….
ಅಭಿಜ್ಞಾ ಪಿ.ಎಮ್.ಗೌಡ