ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅವನು ಆಗಾಗ

ಅವನು ಆಗಾಗ
ವಿಷವ ಕಾರುತ್ತಾನೆ
ಜಾತಿ ಮತಗಳ
ಕ್ರೂರ ಮಿಶ್ರಿತ ಮಾತು

ಹೀಗೆ ಅವನು
ಆಗಾಗ ತಿವಿಯುತ್ತಿದ್ದ
ಎಂ ಎಂ ಕಲಬುರ್ಗಿ
ಅವರ ಬದುಕು ಬರಹಕೆ

ಹರಿತ ಚೂರಿಯ ಟೀಕೆ
ಕೇಕೆ ಹಾಕಿದ
ವ್ಯಂಗ್ಯ ನಗೆ
ಗೌರಿ ಹೆಣವಾದಾಗ

ಈಗ ಸಾಣೆಹಳ್ಳಿ ಶ್ರೀಗಳಿಗೆ
ಬೆದರಿಕೆ ಹಾಕಿದ
ಬಸವ ತತ್ವ ಬೋಧನೆಗೆ
ರದ್ದಿ ಪೇಪರ್ ಎಚ್ಚರಿಕೆ

ಆಗಾಗ ಅವನು
ಹೀಗೆ ಬರೆಯುತ್ತೇನೆ
ಚುಚ್ಚುತ್ತಾನೆ ತಿವಿಯುತ್ತಾನೆ
ರಕ್ಕಸರ ಸಂತಾನ

ಬೇಕು ಅವನಿಗೆ ಸುದ್ಧಿ
ಬರೆವ ಎಲ್ಲರ ಗುದ್ದಿ
ಕೆಡಿಸಿ ನಮ್ಮಯ ನಿದ್ದಿ

ಮಾಡಬೇಕು ಅವನನ್ನು ಮುದ್ದಿ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

14 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ

  1. ಜಾತಿವಾದಿಗಳು ಇನ್ನಾದರೂ ಎಚ್ಚರದಿಂದ ಇರಬೇಕು ಬುದ್ಧ ಬಸವ ಅಂಬೇಡ್ಕರ ಅವರ ವಿಚಾರ ಧಾರೆಯ ಟೀಕಿಸಿದರೆ ಒಳಿತಲ್ಲ

    ಮೂಲ ನಿವಾಸಿ ದ್ರಾವಿಡ ಅರುಣ

  2. ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ ಸರ್ ನಿಮ್ಮ ಕವಿತೆ.

  3. ವಿಷವ ಕಾರುವ ಜನರ ನಾವು ಸದೆಬಡೆಯಲೇಬೇಕು… ನಮ್ಮ ಬರವಣಿಗೆ… ಕಾರ್ಯವೈಖರಿ… ಅಭಿಪ್ರಾಯಗಳಿಂದ… ಮನೋನಿರ್ಧಾರಗಳಿಂದ… ಒಂದೊಳ್ಳೆಯ ಕವನ

    ಸುಶಿ

Leave a Reply

Back To Top