ಕಾವ್ಯಸಂಗಾತಿ
ಸುಕುಮಾರ
ನೆನಪಿನಂಗಳದಲ್ಲಿ…
ನೀನೇ ನೆನಪಿಸಿ ಬಿಟ್ಟೆ
ಇಬ್ಬರೂ ಸಲ್ಲಾಪಿಸಿದ ಕಟ್ಟೆ
ದಣಿವಿತ್ತು ಆ ಕಂಗಳಿಗೆ
ಮತ್ತು ತರಿಸಿತು ಹೂನಗೆ
ಅದ್ಯಾವ ಭಾಷೆ ಆಡಿದೆಯೋ
ಮೇಘ ಸಂದೇಶ ತರಿಸಿದೆಯೋ
ಭ್ರಮರ ನಾನಾದೆ ಕಣೆ
ಭ್ರಮೆಯ ಸುಳಿವಿಲ್ಲ ಜಾಣೆ
ಅಕ್ಷಿ ಬಟ್ಟಲಿನಲಿ ಈಜಾಡುತ
ಕಕ್ಷೆ ದಾಟಿದೆ ಬರಸೆಳೆಯುತ
ಸಲುಗೆಯ ನಕ್ಷೆ ಮೂಡಿಸಿದೆ
ರಸನ ರಸಕ್ಕೆ ಹಂಬಲಿಸಿದೆ
ಮುಳುಗಿದೆ ತಳ ಕಾಣದ ಪಾತಾಳಕೆ
ಮೀನಾದೆ ನೀ ಹಾಕಿದ ಗಾಳಕೆ
ಬಿಡಿಸಿಕೊಳ್ಳಲು ಜವ ಬರಲಿಲ್ಲ
ಒಲವ ಒಪ್ಪಲು ನೆಪ ಸಾಕಲ್ಲ
ಸುಕುಮಾರ
ರಸ ಋಷಿ ಗೆ ಅಭಿನಂದನೆಗಳು,
ಸೊಗಸಾಗಿದೆ.ನಿಮ್ಮ ಕೃಷಿ ಮುಂದುವರೆಯಲಿ.ದೇವರಆಶೀರ್ವಾದ ಸದಾ ಸಿಗಲಿ