“ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ.ಬಸಮ್ಮ ಗಂಗನಳ್ಳಿ

ವಿಶೇಷ ಲೇಖನ

“ಆಂಡ್ರಾಯ್ಡ್ ಫೋನ್

ನನ್ನ ಕೈಗೆ ಬಂದ ನಂತರ

ಬದಲಾದ ನನ್ನ ಬದುಕಿನ ಶೈಲಿ”

ಡಾ.ಬಸಮ್ಮ ಗಂಗನಳ್ಳಿ

ಬದಲಾವಣೆ ಜಗದ ನಿಯಯ. ಅದರೊಟ್ಟಿಗೆ ನಾವು ಸಾಗಬೇಕು,ಕ್ಷಣ ಕ್ಷಣಕ್ಕೂ ಮನುಷ್ಯನ ಭಾವನೆಗಳು, ಆಲೋಚನೆ-ಚಿಂತನೆಗಳು ಹೊಸ ಹೊಸದನ್ನು ಕಾಣುವ,  ಕಾವ್ಯ ಕಟ್ಟುವ ಕಲೆಯಲ್ಲಿ ನವೀನತೆಯನ್ನು.ಕಾಣಿಸಿಕೊಳ್ಳುತ್ತದೆ.
     ಇಂದು ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರ ಕೈಗೂ ಮೊಬೈಲ್ ಬಂದಿದೆ. ಮೊಬೈಲ್ ತಂತ್ರಜ್ಞಾನ ಬಳಕೆಯನ್ನು ಅತೀ ಸುಲಭವಾಗಿ ,ಉತ್ಸುಕರಾಗಿ ಕಲಿಯುತ್ತಿದ್ದಾರೆ.
  ಅಕ್ಷರ ಕಲಿಯದವರೂ ಮೊಬೈಲ್ ಬಳಕೆಯನ್ನು ಲೀಲಾಜಾಲವಾಗಿ ಮಾಡುತ್ತಾರೆ.
ಮೊಬೈಲ್ ನನ್ನ ಕೈಗೆ ಬಂದದ್ದು ೨೦೦೧ ರಲ್ಲಿ . ಆಗ ತಾನೇ ಸ್ಥಿರ ದೂರವಾಣಿಯಿಂದ ಜಂಗಮವಾಣಿ ( ಮೊಬೈಲ್) ಗಳು ತಂತ್ರಜ್ಞಾನದ ಕ್ಷೇತ್ರದಲ್ಲಿ ಹೊಸದಾಗಿ ದಾಂಗುಡಿ ಇಟ್ಟ ಕಾಲವದು. ೨೦೧೧ ರಲ್ಲಿ ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂತು ಎನ್ನಬಹುದು. ಹೊಸ ಹೊಸದನ್ನು ಕಲಿಯುವುದರ ಕಡೆ ಮನಸು ತೆರೆದುಕೊಳ್ಳುವ ಸಮಯ ಏನೋ ಒಂದು ರೀತಿಯ ಸಂತಸ , ಹೆಮ್ಮೆಯ ಪುಳಕಿತ ಭಾವ. ವಾಟ್ಸ್ ಆ್ಯಪ್ ಸಂದೇಶಗಳು ಮೂಲಕ ತಂದೆ- ತಾಯಿ, ಬಂಧುಗಳು, ಸಂಬಂಧಿಕರು, ಸ್ನೇಹಿತರ ಜೊತೆಗೆ ಕಷ್ಟ- ಸುಖಗಳನ್ನು ಹಂಚಿಕೊಂಡಾಗ ಹಗುರಾದ ಅನುಭವ. ಇದಕ್ಕಾಗಿ ಒಂದಿಷ್ಟು ಸಮಯವನ್ನು ಇಟ್ಟುಕೊಳ್ಳುವುದು, ಗೂಗಲ್ನಲ್ಲಿ ಯ ಮಾಹಿತಿಯನ್ನು ಹುಡುಕಿ ತಿಳಿದುಕೊಳ್ಳುವುದು, ಯುಟ್ಯೂಬ್, ಫೇಸ್ಬುಕ್, ಇನಸ್ಟಆಗ್ರಆಮ, ಟೆಲಿಗ್ರಾಂ , ಆನ್ಲೈನ್ ಕ್ಲಾಸ್ ಇತ್ಯಾದಿಯಾಗಿ ಕಲಿತುಕೊಳ್ಳಲು ಹಂಬಲ ಹೆಚ್ಚಾಯಿತು. ಪುಸ್ತಕಗಳನ್ನು, ಫೋನ್ನಲ್ಲಿಯೇ ಓದುವ ನನ್ನ ಓದಿನ ಹಂಬಲಕ್ಕೆ ಮತ್ತಷ್ಟು ಸಮಗ್ರತೆಯನ್ನು ತಂದುಕೊಟ್ಟಿತು. ಕಥೆ, ಕವನ , ಲೇಖನಗಳು,  ಅಭ್ಯಾಸದ ಟಿಪ್ಪಣಿಗಳು, ಸಹಸ್ರ ರೀತಿಯಲ್ಲಿ
ನನ್ನ  ಹೆಚ್ಚಿನ ಬೆಳವಣಿಗೆಗೆ ಹಾಗೂ ಆರೋಗ್ಯಯುತ ಜೀವನಶೈಲಿಯ ಜೊತೆಗೆ ಸ್ವಲ್ಪ ಫ್ಯಾಷನ್ ಲೋಕದ ಕಡೆಗೂ ಕರೆದೊಯ್ದಿದೆ. ಜಗತ್ತಿನ ಎಲ್ಲ ಬೆಳವಣಿಗೆಗಳನ್ನು  ಗತಕಾಲದ ನೆನಪುಗಳನ್ನು ಜೋಡಿಸುವ ಕೊಂಡಿಯಂತೆ ಮೊಬೈಲ್ ಮಾಡಿದೆ.


    ಮೊಬೈಲ್ ಬಳಕೆಯ ಬಗ್ಗೆ  ಜಾಗ್ರತೆ ವಹಿಸಬೇಕು. ಇಲ್ಲವೆಂದರೆ ಏನೆಲ್ಲ ಎಡವಟ್ಟುಗಳು ಸಂಭವಿಸುತ್ತವೆ.  ಬೇಕಾದಂತೆ ಹೊರಬಿಡುವ ಮನಸಿನ ಭಾವನೆಗಳ ನಿಯಂತ್ರಣವೂ ಇಲ್ಲಿ  ಅತೀ ಮುಖ್ಯವಾಗಿದೆ.ನಾನೂ
ದಿನದ ಒಂದಿಷ್ಟು ಸಮಯ( ೨ ತಾಸು) ಮೊಬೈಲ್ ನೋಡುತ್ತೇನೆ.  ಬೇಡದ ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದು ಅನಿವಾರ್ಯವಾದಾಗ ಅತ್ಯಂತ ಆಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತೇನೆ.  ಈ ರೀತಿಯ ಪೇಚಾಟ ಸಾಮಾನ್ಯವಾಗಿ ಎಲ್ಲರಿಗೂ ಆಗಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಮೌನವಾಗಿರುವುದು ಒಳಿತು ಎನ್ನುವುದು ನನ್ನ ಅನಿಸಿಕೆ.  
  ಆಂಡ್ರಾಯ್ಡ್ ಫೋನ್ ಬಳಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬದಲಾವಣೆ ವೈಯಕ್ತಿಕವಾಗಿ ಆಗಿದೆ.ನಮ್ಮ ಮಾತಿನ ಮೇಲೆ, ಸಂದೇಶಗಳನ್ನು ಕಳಿಸುವಾಗ, ಗುಂಪಿನಲ್ಲಿ ಸಂದೇಶಗಳನ್ನು ಕಳಿಸುವಾಗ ಜಾಗರೂಕತೆಯಿಂದ ಇರುವುದರ ಜೊತೆಗೆ ಸಂತೋಷವಾಗಿರುವುದನ್ನು ಕಲಿತಿದ್ದೇನೆ.  ಹೊಸ ಹೊಸ ರೀತಿಯ ಅಡುಗೆ ಮಾಡುವುದು,
ವೈವಿಧ್ಯಮಯವಾದ ಜೀವನಶೈಲಿಯ ವಾಸ್ತವತೆಯ ಅಳವಡಿಸಿಕೊಂಡು ಹೊಸದರ ಕಡೆ ಮನಸನು ತೆರೆದುಕೊಳ್ಳುವ
ಹೊಸತನದಲಿ ಜೀವಿಸುವ ಆನಂದವು ಇದೆ ಎನಿಸುತ್ತದೆ.
   ಜಗತ್ತನ್ನೇ ಮೊಬೈಲ್ನಲ್ಲಿ ನೋಡುವುದು ಸಮಯ & ಹಣ ಉಳಿತಾಯವಾಗುವಂತಹ ಹಿತ- ಮಿತ ಬದುಕಿನ ಪಯಣ ಕೆಲವೊಂದು ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ನನಗೆ ಇಷ್ಟವಾಗಿದೆ.
    ತುದಿಬೆರಳಿನಲ್ಲಿ ಪ್ರಪಂಚದ ಬೇಕು – ಬೇಡದ ಸಂಗತಿಗಳಿಗೆ ಮನಸು ಒಳಗಾಗುತ್ತದೆ. ಬೆಳೆಯಲ್ಲಿ ಇರುವ ಕಸವನ್ನು ತೆಗೆವಂತೆ, ಅಶ್ಲೀಲತೆಗಳ ತೊರೆದು ಆಕಸ್ಮಿಕವಾಗಿ ನೋಡಿದರೂ, ನೋಡದಂತೆ ಸಂಸ್ಕಾರಕ್ಕೆ ಬಾಧೆ ಬರದ ರೀತಿಯಲ್ಲಿ ನಿಯಂತ್ರಣ ಮಾಡುವುದು ಸವಾಲಿನದ್ದಾಗಿದೆ. ಅಬಾಲವೃದ್ಧರಾದಿಯಾಗಿ ಮೊಬೈಲ್ನಲ್ಲಿ , ವಯೋಮಾನದ ಎಲ್ಲಾ  ಹಂತಗಳಿಗೂ ಸಮಗೋಚರ ದೃಶ್ಯಗಳು ಕಾಣಿಸುವವು. ಚಿಕ್ಕಮಕ್ಕಳ ಮೇಲೆ, ಯುವಕರನ್ನು ದಾರಿತಪ್ಪಿಸುತ್ತಿವೆ, ಒಮ್ಮೊಮ್ಮೆ ಸುಶಿಕ್ಷಿತರು, ಪ್ರಜ್ಞಾವಂತರೂ ಪ್ರಬುದ್ಧರೂ, ೫೦-೬೦ ಮೇಲ್ಪಟ್ಟ  ವಯಸ್ಸಿನವರು  ಅಲ್ಪಸ್ವಲ್ಪ ಚಂಚಲವಾಗುವುದು ಸಹಜ ತತ್ಕ್ಷಣ ತಿದ್ದಿಕೊಳ್ಳಬೇಕೆನ್ನುವುದು ನನ್ನ ಅಭಿಮತ. ಅಪಾಯಕಾರಿ ಸಂದೇಶಗಳು ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತವೆ. ಕದ್ದು ಮುಚ್ಚಿ ಮಾತನಾಡುವುದು, ಸರಿಯಲ್ಲ


ಒಮ್ಮೊಮ್ಮೆ  ಮನೆಯವರ ಎದುರಿಗೆ ಪ್ರಾಮಾಣಿಕವಾಗಿ ಬೇರೆ ಪುರುಷ ಅಥವಾ ಸ್ತ್ರೀಯರ ಜೊತೆ ಮಾತನಾಡಿದರೂ ಸಂಶಯಕ್ಕೆ ಎಡೆಯಾಗುತ್ತದೆ.  ಉಪಯೋಗವಿರುವ ಜ್ಞಾನಾ ಭಿವೃದ್ದಿಗೆ ಸಂಬಂಧಿಸಿದ ವೃತ್ತಿಪರ ಜೀವನಕ್ಕೆ ಅಗತ್ಯವಿರುವ ಮಾಹಿತಿಗಳನ್ನು  ತಡಹೊತ್ತಿನತನಕ ನೋಡುತ್ತಿದ್ದರೂ  ಯಾವತ್ತೂ ಆನ್ಲೈನ್ನಲ್ಲಿ ಇರ್ತಾರೆ ಅನ್ನುವ ಮಾತುಗಳು ಕೇಳಿಬರುತ್ತವೆ.
ಯಾರೇನೇ ಅಂದುಕೊಳ್ಳಲಿ ಬಿಡಲಿ ನನ್ನ  ಭವಿಷ್ಯಕ್ಕೆ , ನನ್ನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಅನಂತ ಅಂಶಗಳನ್ನು ನಾನು  ಮೊಬೈಲ್ನಲ್ಲಿ ನೋಡುತ್ತೇನೆ. ಗುರುಗಳು,ಪುಸ್ತಕಗಳು ಹೇಗೋ ಹಾಗೆ ನನಗೆ ಆಂಡ್ರಾಯ್ಡ್ ಮೋಬೈಲ್ ಕೂಡಾ ನನ್ನನ್ನು ಬೆಳೆಸಿದೆ. ನನ್ನ ಬೆಳವಣಿಗೆಯಲ್ಲಿ ಈ ಮೋಬೈಲ್ ಕೊಡುಗೆ ತುಂಬಾ ಇದೆ.  ಪ್ರಜ್ಞಾಪೂರ್ವಕವಾಗಿ ಬಳಸುವುದರಲ್ಲಿ ಒಳ್ಳೆಯ ಪರಿಣಾಮವಾಗಿದೆ, ಅಪ್ರಜ್ಞಾಪೂರ್ವಕವಾಗಿ ಬಳಸಿದರೆ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ನೋಡುವವರ ದೃಷ್ಟಿಕೋನ ಸರಿಯಾಗಿರಬೇಕು ಅಷ್ಟೇ!
ನನ್ನ ಬದುಕಿಗೆ ಹೊಸತಿರುವನ್ನು ನೀಡಿದ
 “ಆಂಡ್ರಾಯ್ಡ್ ಮೋಬೈಲ್”                  
        ತಂತ್ರಜ್ಞಾನಕೆ

 
——————————————————

ಡಾ.ಬಸಮ್ಮ ಗಂಗನಳ್ಳಿ

3 thoughts on ““ಆಂಡ್ರಾಯ್ಡ್ ಫೋನ್ ನನ್ನ ಕೈಗೆ ಬಂದ ನಂತರ ಬದಲಾದ ನನ್ನ ಬದುಕಿನ ಶೈಲಿ” ಡಾ.ಬಸಮ್ಮ ಗಂಗನಳ್ಳಿ

Leave a Reply

Back To Top