ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

‘ಮೊಬೈಲ್ ಮತ್ತು ನಾನು’

ಸವಿತಾ ಮುದ್ಗಲ್

ಮೊಬೈಲ್ ಮತ್ತು ನಾನು ನಿತ್ಯವೂ ನಮ್ಮ ಬಳಕೆಯ ವಸ್ತುಗಳಲ್ಲಿ ಅತಿ ಹೆಚ್ಚು ಬಳಸುವ ಮೊಬೈಲ್ ಇದನ್ನು ಎಲ್ಲರ ಕೈಯಲ್ಲೂ ಇತ್ತೀಚಿಗೆ ಒಂದಕ್ಕಿಂತ ಹೆಚ್ಚು ಕಾಣಬಹುದು.

ನೆಮ್ಮದಿ ಕಾಣದ ಮನವಿಲ್ಲ,ಮೊಬೈಲ್ ಇಲ್ಲದ ಮನೆ ಇಲ್ಲ ಎಂದರೆ ಸತ್ಯ ಎಂದು ಹೇಳಬಹುದು. ಮೊದಲೆಲ್ಲ ನಾವು ಮೊಬೈಲ್ ನೋಡದ, ಜೊತೆಗೆ ಮನೆಯಲ್ಲಿ ಟಿವಿಯು ಕೂಡ ನೋಡದವರು. ಶಾಲೆಯ ರಜೆ ಬಂದಿತಂದರೆ ರವಿವಾರದಂದು ಯಾರಾದರೂ ಮನೆಯಲ್ಲಿ ಟಿವಿ ಆನ್ ಮಾಡಿ ರಾಮಾಯಣ, ಮಹಾಭಾರತ ಧಾರಾವಾಹಿ ಹತ್ತಿತೆಂದರೆ ಎಲ್ಲಿದ್ದರೂ ಓಡೋಡಿ ಹೋಗಿ ಆ ಸ್ಥಳದಲ್ಲಿ ಕುಳಿತು ಒಟ್ಟಾಗಿ ವೀಕ್ಷಿಸುತ್ತಿದ್ದೆವು ಜೊತೆಗೆ ಅದರಲ್ಲಿ ಬರುವ ಎಲ್ಲಾ ವ್ಯಕ್ತಿಗಳು ನಿಜವೆಂದು ಭಾವಿsi ಅವರಿಗೆ ಏನಾದರೂ ಉಂಟಾದರೆ ಅದು ಸತ್ಯವೆಂದು ಭಾವಿಸುತಿದ್ದೆವು. ಒಮ್ಮೊಮ್ಮೆ ಕಣ್ಣೀರು ಹಾಕಿದ್ದು ಉಂಟು.
ಬೇರೆ ಊರಿನವರೊಂದಿಗೆ ಸಂಪರ್ಕ ಮಾಡಬೇಕೆಂದರೆ ಮೊದಲೆಲ್ಲ ಮೊಬೈಲ್ ಇರುತ್ತರಲಿಲ್ಲ ಆಗ ನಾವು ಇಂಗ್ಲೆಂಡ್ ಕವರ್ ಬರೆದು ಪತ್ರವನ್ನು ಪೋಸ್ಟ್ ಮಾಡಿ ಅವರ ಬರುವ ಉತ್ತರಕ್ಕೆ ದಾರಿ ಕಾಯುತ್ತಿದ್ದೆವು. ಅದನ್ನು ಓದಿ ಸಂತೋಷಪಡುತ್ತಿದ್ವು. ಅದೆಲ್ಲವಂತು ಈಗ ನೆನಪು ಮಾತ್ರವಾಗಿ ಉಳಿದಿದೆ ಇನ್ನು ಬರಿಯುವ ರೂಢಿಯು ಕೂಡ ತಪ್ಪಿದೆ ಅಂತ ಹೇಳಬಹುದು.

ನಾನು ಮೊಬೈಲ್ ನೋಡಿದ್ದು ನನ್ನ ಎಂಬಿಎ ಓದ ಹೋದನ್ನು ಮಾಡುತ್ತಿರುವಾಗ ಅಲ್ಲಿ ನಮಗೆ ಎಲ್ಲರಲ್ಲಿಯೂ ಮೊಬೈಲ್ ಇರುತ್ತಿರಲಿಲ್ಲ ಆಗ ನನ್ನ ಗೆಳತಿಯ ಕಡೆ ಒಂದು ಮೊಬೈಲ್ ಇತ್ತು ಅದು ನೋಕಿಯಾ ಟಚ್ ಸ್ಕ್ರೀನ್ ಮೊಬೈಲ್ ಅಲ್ಲ ಮತ್ತು ಆ ಮೊಬೈಲಲ್ಲಿ ಕೇವಲ ಊರುಗಳಿಗೆ ಫೋನ್ ಮಾಡಿ ಮಾತಾಡಲು ಅಷ್ಟೇ ಬಳಕೆಯಾಗುತ್ತಿತ್ತು. ಇನ್ನಿತರ ಯಾವುದೇ ಗೇಮ್ ಆಡಲಾಗುತ್ತಿರಲಿಲ್ಲ ಇನ್ನೊಂದು ಆ ಮೊಬೈಲಲ್ಲಿ ಒಂದೇ ಒಂದು ಗೇಮ್ ಆಡಲು  ಅವಕಾಶವಿದ್ದು ಅದೇ ಹಾವಿನ ಆಟ ಇದನ್ನು ಆಡಲು ಒಬ್ಬರಿಗೊಬ್ಬರು ಮೊಬೈಲನ್ನು ಕಸಿದುಕೊಳ್ಳುತ್ತಿದ್ದೆವು.

 ಮೊಬೈಲ್ ಬಳಕೆಯ ಉಪಯೋಗಗಳು
ಇವೆ ಆದರೆ ಅದನ್ನು ಏಕೆ ಸರಿಯಾದ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವುದನ್ನು ನಮಗೆ ತಿಳಿದಿರಬೇಕು ಈ ತಂತ್ರಜ್ಞಾನದ ಯುಗದಲ್ಲಿ ಈ ಮೊಬೈಲ್ ಎಂಬುದು ನಮ್ಮ ಕೈಯಲ್ಲಿ ಒಂದು ಅಸ್ತ್ರವಿದ್ದಂತೆ ಒಂದು ಕ್ಷಣದಲ್ಲಿ ನಾವು ಎಲ್ಲಾ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಬಹುದು ಜೊತೆಗೆ ಯಾವುದೇ ಕೆಲಸ ಕಾರ್ಯಗಳನ್ನು ಕುಳಿತಲ್ಲಿಯೇ ಒಂದು ಫೋನ್ ಮುಖಾಂತರ ವಿಚಾರಿಸಿ ಮಾಡಲು ಈ ಮೊಬೈಲ್ ಬಳಕೆಯಿಂದಲೇ ಎಂದು ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಯಾವುದೇ ವಹಿವಾಟನ್ನು ಹಣದ ಮುಖಾಂತರ ಮಾಡದೆ ಎಲ್ಲವನ್ನೂ ಆನ್ಲೈನ್ ಮುಖಾಂತರ ಮಾಡುವುದು ಒಂದು ಉತ್ತಮವೆಂದು ಹೇಳಬಹುದು. ಏಕೆಂದರೆ ದುಡ್ಡನ್ನು ಒಂದು ಕಡೆಯಿಂದ ಇನ್ನೊಂದು ಕಡೆ ತೆಗೆದುಕೊಂಡು ಹೋಗೋದು ತುಂಬಾ ಸಮಸ್ಯೆ ಉಂಟಾಗುತ್ತದೆ, ಅದನ್ನು ಸರಿಸಾಗಿ ನಾವು ಮನೆಯಲ್ಲಿದ್ದು ಕಂಡೆ ಅದರ ಅಮೌಂಟನ್ನು ಪೆ ಮಾಡಲು ಈ ಆನ್ಲೈನ್ ಬಳಕೆಯಿಂದ ಅದು ಈ ಮೊಬೈಲ್ ಬಳಕೆಯಿಂದ ಎಂದೇ ಹೇಳಬಹುದು.

 ಒಬ್ಬ ಗೃಹಿಣಿಯಾಗಿ ಮನೆಯಲ್ಲಿದ್ದುಕೊಂಡೆ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡು ಈ ಹಣದ ವಹಿವಾಟನ್ನು ನಿಭಾಯಿಸುವ ತೊಂದರೆ ಸಾಮಾನ್ಯವಲ್ಲ ಏಕೆಂದರೆ ಈ ಮೊಬೈಲ್ ಬಳಕೆಯಿಂದಲೇ ಸಲೀಸಾಗಿ ನಾವು ಜೀವನ ಸಾಗಿಸುತ್ತಿದ್ದೇವೆಂದರೆ ತಪ್ಪಾಗಲಾರದು ಮನೆಗೆ ಅತ್ಯಗತ್ಯವಾದ  ನಿತ್ಯ ಸಾಮಗ್ರಿಗಳನ್ನು ದೂರದಿಂದಲೇ ಮನೆಗೆ ಮನೆಯವರೆಗೂ ತರಿಸಿಕೊಳ್ಳಲು ಬೇಕಾಗಿರುವ ಸಾಧನವೆಂದರೆ ಈ ಮೊಬೈಲ್. ಮಕ್ಕಳ ಶಾಲಾ ಪೀಸ್ ತುಂಬಲು, ಕರೆಂಟ್ ಬಿಲ್ಲನ್ನು ,ವಾಟರ್ ಬಿಲ್ಲನ್ನು ,ಮನೆ ತೆರಿಗೆಯನ್ನು, ಮೊಬೈಲ್ ರೀಚಾರ್ಜ್ ಮಾಡಿಸಲು ಆನ್ಲೈನ್ ಶಾಪಿಂಗ್ ಮಾಡಲು ಈ ಮೊಬೈಲ್ ಬಳಕೆಯಿಂದ ಹೇಳಿದರೆ ತಪ್ಪಾಗಲಾರದು.

 * ಮೊಬೈಲ್ ಬಳಕೆಯಿಂದ ಆಗುವ ದುರುಪಯೋಗಗಳು
ಒಬ್ಬ ವ್ಯಕ್ತಿಗೆ ಹೇಗೆ ಒಳ್ಳೆ ಮತ್ತು ಕೆಟ್ಟ ಗುಣಗಳ ಜೊತೆಯಲ್ಲಿರುವುದು. ಅದೇ ರೀತಿಯಾಗಿ ಒಂದು ವಸ್ತುವನ್ನು ಬಳಕೆ ಮಾಡುವಾಗ ಆ ವಸ್ತುವಿಗೆ ಅದರಿಂದ ಉಪಯೋಗ ಅಥವಾ ದುರುಪಯೋಗಗಳು ಆ ವಸ್ತುವಿನಿಂದಲೇ ಸೇರಿರುತ್ತದೆ.
ಇತ್ತೀಚಿನ ಆನ್ಲೈನ್ ಹಾವಳಿಯಿಂದ ಅನೇಕ ಹೆಣ್ಣು ಮಕ್ಕಳು, ಕಾಲೇಜ್ ಯುವತಿಯರು, ಯುವಕರು  ಈ ಮೊಬೈಲ್ಯಿಂದ ದಾರಿ ತಪ್ಪಿ, ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಂಡಿದ್ದಾರೆ ಅಲ್ಲಿ ನಮಗೆ ಪರಿಚಯವಿಲ್ಲದವರು ಫ್ರೆಂಡ್ ರಿಕ್ವೆಸ್ಟ್ ಕಳಿಸಿ ನಾವು ಒಂದು ವೇಳೆ ಅದನ್ನು ಸ್ವೀಕರಿಸಿದರೆ ತಕ್ಷಣವೇ ಅದರಿಂದ ಹಾಯ್ ಹಲೋ ಅಂತ ಮೆಸೇಜ್ ಬಂದು ನಮಗೆ ಗೊತ್ತಿದ್ದವರಂತೆ ತುಂಬಾ ಆತ್ಮೀಯರಂತೆ ನಟಿಸುತ್ತಾರೆ ಹಾಗೆಯೇ ನಾವೇನಾದರೂ ಮಾತಾಡಲು ಮುಂದುವರೆದರೆ ನಮ್ಮಿಂದ ಹಣವನ್ನು ಕೇಳುತ್ತಾರೆ ನಾವೇನಾದರೂ ನಂಬಿ ಅವರಿಗೆ ಅಮೌಂಟ್ ಅನ್ನು ಕೊಟ್ಟರೆ ಹಣ ಪಡೆದ ಕೂಡಲೇ ಆ ನಂಬರ್ ಬ್ಲಾಕ್ ಮಾಡಿಕೊಳ್ಳುತ್ತಾರೆ ಅಥವಾ ಇನ್ನಿತರ ಕೆಟ್ಟದ್ದಕ್ಕೆ ಉಪಯೋಗಿಸಿ ಕೊಂಡು ನಮ್ಮನ್ನು ಬ್ಲಾಕ್ಮೇಲ್ ಮಾಡಲು ಮುಂದೆ ಬರುತ್ತಾರೆ.

 ಇತ್ತೀಚಿಗೆ ನನಗಾದ ಮುಖಪುಟದಲ್ಲಿ ಭಯವೆಂದರೆ ಒಂದು ಫೋಟೋ ಲ್ಯಾಬ್ ಆಪ್ ಬಳಕೆಯಲ್ಲಿತ್ತು ಅದರಲ್ಲಿ ನಮ್ಮ ಫೋಟೋವನ್ನು ಎಡಿಟ್ ಮಾಡಿ ಅದಕ್ಕೆ ತಕ್ಕ ಬರಹವನ್ನು ಪೋಸ್ಟ್ ಮಾಡುತಿದ್ದೆ. ಇದನ್ನು ಬಳಕೆ ಮಾಡುತ್ತಿದ್ದ ಒಂದೆರಡು ದಿನದಲ್ಲಿಯೇ ನನಗೆ ವಾಟ್ಸಪ್ ಕಾಲ್ +92code ಹೊಂದಿರುವ ನಂಬರ್ ಗಳಿಂದ ನನಗೆ ಕಾಲ್ ಬರಲು ಪ್ರಾರಂಭಿಸಿದವು ಇದರಿಂದ ನನಗೆ ಭಯ ಉಂಟಾಗಿಂದ ಆಪ್ ಬಳಕೆ ಮಾಡುವುದು ಬಿಟ್ಟು ಹೊರಬಂದಿದ್ದೇನೆ ಇದನ್ನು ಮುಖಪುಟದಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ ಇದರಿಂದ ಬಳಕೆ ಮಾಡುತ್ತಿರುವ ಇನ್ನಿತರ ಸ್ನೇಹಿತೆಯರು ಕೂಡ ಬಳಕೆ ಮಾಡುತ್ತಿಲ್ಲ.

ಹೀಗೆ ಮೊಬೈಲ್ ಇಂದ ಅನುಕೂಲ ಇರುವುದು ಜೊತೆಗೆ ಗೊತ್ತಿಲ್ಲದ ಆಪ್ ಬಳಕೆ ನಮ್ಮ ನೆಮ್ಮದಿಯನ್ನು ಕೂಡ ಹಾಳು ಮಾಡಬಹುದು.


ಸವಿತಾ ಮುದ್ಗಲ್

About The Author

3 thoughts on “‘ಮೊಬೈಲ್ ಮತ್ತು ನಾನು’ ಸವಿತಾ ಮುದ್ಗಲ್”

  1. ಸಂಗಾತಿ ಬಳಗದ ಸಂಪಾದಕರಿಗೆ ನನ್ನ ಲೇಖನ ಪ್ರಕಟಿಸಿ ಸದಾ ನಮಗೆ ಪ್ರೋತ್ಸಾಹ ನೀಡುವ ಮಧು ಸರ್ ಗೆ ಹೃದಯ ಪೂರ್ವಕ ಧನ್ಯವಾದಗಳು

Leave a Reply

You cannot copy content of this page

Scroll to Top