ಮಮತಾರವೀಶ್ ಕವಿತೆ-ಹಚ್ಚುತ್ತೇನೆ ಹಣತೆ..

ಕಾವ್ಯ ಸಂಗಾತಿ

ಮಮತಾರವೀಶ್

ಹಚ್ಚುತ್ತೇನೆ ಹಣತೆ..

ಹೃದಯದ ದೀಪ ಬೆಳಗಲು
ಯಾಕೋ ಮೌನ,
ಸುಸ್ತು ,ಆಯಾಸ
ಮೊಗದಲ್ಲಿ ನಗು
ಅರ್ಥವಾದರೂ ಅರ್ಥವಾಗದ
ಮನಸ್ಸು…

ಭಾವನೆಗಳು ಕತ್ತಲೆಯಲ್ಲಿ
ಮಬ್ಬಾಗಿವೆ
ಮನವ ತೆರೆದಿಡಲು
ಭಯ ಆತಂಕ
ಹಣತೆಗಳ ಮುಂದೆ
ಬೊಬ್ಬಿಡುವ ಸ್ಫೋಟಕಗಳು….

ಅರೆ ಘಳಿಗೆ ಕಿವಿ ಮುಚ್ಚಿದರೂ
ಮತ್ತದೇ ಶಬ್ಧ
ನೂರಾರು ಎಳೆ ಜೀವಗಳು
ನರಳಾಡುತ್ತಿವೆ
ಸುಟ್ಟು ಕರಕಲಾಗುತ್ತಿವೆ….

ಕೇಳುವವರು ,ಹೇಳುವವರು
ಸಂತೈಸುವವರು ಇಲ್ಲ
ಯಾರು ಯಾರ ಬಳಿಗೂ
ಹೋಗುವವರಿಲ್ಲ…

ನೆಲಕ್ಕುರುಳಿದ ಅವಶೇಷಗಳ
ಎತ್ತಿ ಬದಿಗೆ ಸರಿಸುವರು
ಬದುಕುಳಿದವರಿಗೆ ಉಣಲು
ಕುಡಿಯಲು ನೀಡುವರು…

ದ್ವೇಷ ಅಸೂಯೆಗಳ ಹೃದಯದಲಿ
ದೈವಿಕತೆಯ ಬೆಳಕು
ಚೆಲ್ಲುವ ಸಮಯವಿಲ್ಲ.
ವ್ಯವಧಾನವೂ ಇಲ್ಲ..

ಆದರೂ ನಾನು ಹಚ್ಚುತ್ತೇನೆ
ಸುಜ್ಞಾನದ ದೀವಿಗೆಯನು
ಎಲ್ಲರ ಹೃದಯವು ದೈವಿ
ಬೆಳಕನು ಪಡೆಯಲೆಂದು…

ಮಾನವಕುಲಕ್ಕೆ ಒಂದೇ ಗಾಳಿ
ನೀರು ಬೆಳಕು ಪ್ರಕೃತಿ
ಅರಿತು ನಡೆದರೆ,ಅರಿತು ಬಾಳಿದರೆ
ಜಗವೆಲ್ಲ ದೀಪಾವಳಿ…


ಮಮತಾರವೀಶ್

Leave a Reply

Back To Top