ಕಾವ್ಯ ಸಂಗಾತಿ
ಶ್ರೀಕಾಂತಯ್ಯ ಮಠ
ಧನ ದಾಹ
ಕೂಗಬೇಡ ಮನವೆ
ಧನ ದಾಹ
ಕಡಿಮೆಯೇನಿಲ್ಲ
ಮನ ಮರ್ಕಟವಾಗಿದೆ
ಕರ್ಕಶ ಧ್ವನಿಯಲ್ಲಿ
ಚಂಚಲವೇಕೆ..?
ಇಲ್ಲಿ ಧನದಾಹಿಗಳ
ಪ್ರಪಂಚಕ್ಕೆ ಬೆಲೆಯಿದೆ
ಹಣದ ಮನೆ ದೊಡ್ಡದಿದೆ
ಕೊಡುವ ಕೈ ಚಿಕ್ಕದಿದೆ
ಅದರ ಕೀಲಿ ಕೈ ಸಿಗದಂತಿದೆ
ಹುಡುಕಿದರೆ ಕಳ್ಳ ನೀನು.
ಹಣದ ಚೀಲವನ್ನು ಹೆಣದ ಮೇಲೆ ಹಾಕಲ್ಲ
ಮಣ್ಣೋಳಗಿನ ಬಂಗಾರ ಮೈ ಮೇಲೆ ಬಿಡುವುದಿಲ್ಲ
ಕಣ್ಣೋಳಗಿನ ಕನಸು ಯಾರೂ ನೋಡೋದಿಲ್ಲ
ಆಡಂಬರದ ಬದುಕಿಗೆ ಬಣ್ಣ ಹಚ್ಚಿದವರು ಊರು ತುಂಬೆಲ್ಲ
ನಿನಗೇನಿಲ್ಲ ಎಂದು ಕೊರಗಿದರೆ ತಪ್ಪಾದೀತು…!!
ಗಳಿಸುವ ಮುಂಚೆ ನಿನ್ನದೇನು ನಿನಗೇನಿತ್ತು
ದುಡಿಯುವ ಮುಂಚೆ ನಿನಗೇನು ಕೆಲಸವಿತ್ತು
ನಿನ್ನವರ ನಂಬಿದೆ ಆದರೆ ನಂಬಿಕೆಯ ಮಾತು ಎಲ್ಲಿ ಉಳಿದಿತ್ತು
ಇಲ್ಲಿ ನಾವೆ ಬೆಳೆಯಬೇಕು ಹಣ್ಣಾದರೂ ಬಾಗಬೇಕು.
ಬೆಳೆದ ಮರ ಇನ್ನೊಂದಕ್ಕೆ ನೆರಳು
ಉರುಳಿದ ಮರ ಇನ್ನೊಂದು ಶವಕ್ಕೆ ಉರುಳು
ಗೋರಿ ಮೇಲಿನ ಹೂವಾಗಿ ಹೋದಿ
ಬದುಕುವ ದಾರಿ ಇನ್ನೊಬ್ಬರಿಗೂ ಇದೆ
ನಿನ್ನದಾರಿ ಹೇಗಿತ್ತು ಅದನ್ನೊಮ್ಮೆ ನೋಡಲಿ ಬಿಡು
ತುಂಬಿದ ಕೊಡ ತುಳುಕುವುದೆ ಎನ್ನುವುದು ಸತ್ಯವಲ್ಲವೆ…?
————————
ಶ್ರೀಕಾಂತಯ್ಯ ಮಠ