ಶಾಂತಲಿಂಗ ಪಾಟೀಲ ಕವಿತೆ-ರಸ್ತೆ

ಕಾವ್ಯ ಸಂಗಾತಿ

ಶಾಂತಲಿಂಗ ಪಾಟೀಲ ಕವಿತೆ-

ರಸ್ತೆ

ಈ ರಸ್ತೆ ಹಾಗೇ ಬಿದ್ದು ಕೊಂಡಿದೆ
ನಾನು ಮಗು ಆಗಿದ್ದಾಗಲೂ
ನನಗೆ ಮಗು ಆಗಿ ಆ ಮಗುವಿಗೆ
ಮಗುವಾಗಿರುವಾಗಲೂ!

ಇದು ಅಲ್ಲಿ ಇಲ್ಲಿ ಡೊಂಕು
ನಡು ನಡುವೆ ಕಾಡಿನ ಸೊಂಪು
ನಡೆದು ಹೋದವರೂ
ಅನುಭವಿಸಿದ್ದಾರೆ ಸೋಂಕು
ಎಷ್ಟು ತೀವ್ರ ಎಂದರೆ
ಉರುಳಿ ಹೋದವು
ತಲೆ ತರಗೆಲೆಯಂತೆ!

ಬೇರೆ ರಸ್ತೆಗಳು ಹುಟ್ಟಿಕೊಂಡರೂ
ಬಳಸಲಿಲ್ಲ ನಮ್ಮವರು
ಇರುವುದನ್ನೇ ನೇರ ಮಾಡಿಕೊಳ್ಳಲೂ ಇಲ್ಲ
ಸ್ವ ಪಥಂ ಚರಂ ನಿಧನಂ ಶ್ರೇಯಂ ಅನ್ಯಂ ನಾಸ್ತಿ!
ನಂಬಿಕೆ ಗತಿ ಪಡೆಯಲೇ ಇಲ್ಲ, ಆ ರಸ್ತೆಯಂತೆ
ಬಿದ್ದುಕೊಂಡಿದೆ ನಮ್ಮವರ ಎದೆಯಲ್ಲಿ!

———————–

ಶಾಂತಲಿಂಗ ಪಾಟೀಲ

Leave a Reply

Back To Top