ಬದುಕು ಬದಲಿಸಿದ ಆಂಡ್ರಾಯ್ಡ್ ಫೋನ್,ಡಾ ಸರೋಜಾ ಜಾಧವ

ವಿಶೇಷ ಲೇಖನ

ಡಾ ಸರೋಜಾ ಜಾಧವ

ಬದುಕು ಬದಲಿಸಿದ ಆಂಡ್ರಾಯ್ಡ್ ಫೋನ್,

ಆಂಡ್ರಾಯ್ಡ್ ಫೋನ್ ಮೊದಲು ನೋಡಿದಾಗ ಇಂತಹ ಫೋನ್ ನನ್ನ ಕೈಗೆ ಬಂದರೆ ಚೆಂದ ಅಂದುಕೊಂಡೆ.ಕೀಪ್ಯಾಡ ಫೋನ್ ನೋಕಿಯಾ ಇತ್ತು.ಗೆಳತಿ ಶ್ವೇತಾ ಮೊದಲ ಬಾರಿಗೆ ಆಂಡ್ರಾಯ್ಡ್ ಫೋನ್ ತಂದಿದ್ದಳು.ನೋಡಿದರೆ ಬರೀ ಸ್ಕ್ರೀನ್ ಇದೆ.ಇದರಾಗ ಬಟನ್ ಇಲ್ಲ ಹೆಂಗ ಆಪರೇಟ ಮಾಡೋದು ಅಂತ ನನಗೆ ಗೊಂದಲವಿತ್ತು.ಗೆಳತಿಯ ಫೋನ್ ಆಪರೇಟ ನೋಡಿ ವಾಟ್ಸಪ್ ಮೆಸೇಜ್ ಫೇಸ್ಬುಕ್ ಇದೆಲ್ಲ ನೋಡಿ ನನಗೂ ಇಂತಹ ಫೋನ್ ಬೇಕು ಅಂತ ಮನೆಯವರ ಹತ್ತಿರ ಕೇಳಿದೆ.ಮೊದಲು ಉಪಯೋಗಿಸಿದ ಫೋನ್ ವಿವೋ.

ಫೋನ್ ಬಂದು ನಂತರ ಬದುಕಿನ ಉತ್ಸಾಹ ಹೆಚ್ಚಿತು.ಮೊದಲನೆಯದಾಗಿ ನನಗೆ ಫೋಟೋ ಹುಚ್ಚು ಭಾಳ ಇತ್ತು.ಸೆಲ್ಪೀ ಫೋಟೋ ತೆಗೆದು ಆನಂದಿಸಿದ ಕ್ಷಣಗಳು ಮಧುರಾನುಭೂತಿ ನೀಡುತ್ತವೆ.ವಾಟ್ಸಪ್ ಮೆಸೇಜ್ ಮಾಡುವುದು ಕಲಿತೆ.ಫೇಸ್ಬುಕ್ ಉಪಯೋಗದಿಂದ ಸ್ನೆಹಬಳಗ ಹೆಚ್ಚಿತು.ಕವಿತೆ ಅಮೂಲ್ಯ ಫೋಟೋ ಫೇಸ್ಬುಕ್ ಮುಖಾಂತರ ಹಂಚಿಕೊಂಡೆ.ಹೈಸ್ಕೂಲು ಕಾಲೇಜು ಸ್ನೇಹಿತರು ಫೇಸ್ಬುಕ್ ಮುಖಾಂತರ ಮರುಭೇಟಿ ಆದರು.
ಅನೇಕ ಗುಂಪುಗಳು ಸಾಹಿತ್ಯ ಸಂಗೀತ ಯೋಗ ಟೈಲರಿಂಗ್ ಹೀಗೆ ತುಂಬಾ ಉಪಯೋಗ ಆಗತೊಡಗಿ ಮನೆಯಲ್ಲಿಯೆ ಈ ಎಲ್ಲ ಕಲಿಕೆ ಸಾಧ್ಯ ಆಯ್ತು. ಗೂಗಲ್ ಮೀಟ್ ಮುಖಾಂತರ ಎಷ್ಟೊ ಸೆಮಿನಾರ್ ಹಾಜರಾಗಲು ಸಾಧ್ಯವಾಯಿತು.

ಕರೋನ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಮಾಡಲು ಅನುಕೂಲ ಆಯ್ತು.ಸಾಹಿತಿ ಕಲಾವಿದರ ಸಾಧನೆಗಳ ಪರಿಚಯ ಆಯಿತು.ಕನ್ನಡ ಟೈಪಿಂಗ್ ಕಲಿತು ಕತೆ ಕವಿತೆ ಬರೆಯಲು ಪ್ರಾರಂಭಿಸಿದೆ.

ಸಾಹಿತ್ಯ ಗುಂಪುಗಳು ಅಕ್ಕನ ಅರಿವು  ಕನ್ನಡ ಕಾವ್ಯಕೂಟ ಉತ್ತರ ಕರ್ನಾಟಕ ಲೇಖಕಿಯರ ಸಂಘ ಗಣಕರಂಗ ಇವರೆಲ್ಲ ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗೆ ಭಾಗವಹಿಸುವ ಅವಕಾಶ ಸಿಕ್ಕಿತು.

ನಾನು ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಲು ಮಕ್ಕಳಿಗೆ ನೋಟ್ಸ್ ಕಳುಹಿಸಲು ಉಪಯೋಗ ಆಯ್ತು. ಎನ್ ಇ ಪಿ ಸಿಲೆಬಸ್ ಇರುವುದರಿಂದ ಅಟೆಂಡೆನ್ಸ್ ವರ್ಕಡೈರಿ ಅಸೈನ್ಮೆಂಟ್ ಹಾಕಲು ತುಂಬಾ ಅನುಕೂಲ.

ಒಮ್ಮೊಮ್ಮೆ ಅನಿಸುತ್ತದೆ.ಫೇಸ್ಬುಕ್ನಲ್ಲಿ ಸಮಯವ್ಯರ್ಥ ಮಾಡುತ್ತಿರುವೆ ಅಂತ.ಎಚ್ಚೆತ್ತುಮಿತವಾಗಿ ಉಪಯೋಗಿಸಿದರೆ ಆಂಡ್ರಾಯ್ಡ್ ಫೋನ್ ತುಂಬಾ ಚೆನ್ನಾಗಿದೆ.ಅದು ಬಂದು ನಂತರ ಬದುಕಿನ ಉತ್ಸಾಹ ಹೆಚ್ಚಿ ದಿಕ್ಕು ಬದಲಾಗಿದೆ.ಅತಿಯಾದರೆ ಅಮ್ರತವವಿಷ. ಮಿತವಾಗಿ ಬಳಸಿದರೆ ಯಾವುದೂ ಕೆಟ್ಟದ್ದಲ್ಲ.


ಡಾ ಸರೋಜಾ ಜಾಧವ

6 thoughts on “ಬದುಕು ಬದಲಿಸಿದ ಆಂಡ್ರಾಯ್ಡ್ ಫೋನ್,ಡಾ ಸರೋಜಾ ಜಾಧವ

  1. ತಮ್ಮ ಸುಂದರ ಲೇಖನದ ಮೂಲಕ ತುಂಬ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ… … ಧನ್ಯವಾದಗಳು

Leave a Reply

Back To Top