ಮಾಲಾ ಚಲುವನಹಳ್ಳಿ-ಹಂಪೆಯ ವೈಭವ

ಕಾವ್ಯಸಂಗಾತಿ

ಮಾಲಾ ಚಲುವನಹಳ್ಳಿ

ಹಂಪೆಯ ವೈಭವ

[ ಕೊಂಪೆಯಲ್ಲ ಹಂಪೆಯು, ಗತ
ವೈಭವದ ಪರಂಪರೆಯು, ನಾಡ
ಹಿರಿಮೆಯ ಸಾರುವ ಶಿಲೆಗಳಲ್ಲಿ
ಕಲೆಯಾಗಿಹ ಸಾಮ್ರಾಜ್ಯವು.

ಡೊಳ್ಳು ಹೊಟ್ಟೆ ಗಣಪನೊಡನೆ
ಕಲ್ಲಿನ ಕೆತ್ತನೆಯ ಉಗ್ರ ನಾರಸಿಂಹನ
ಸಂಗೀತ ಸುಧೆ ಸಮರಸವ ಸಾರಿ
ನಾಡ ಹೆಮ್ಮೆಯ ಶೀಮಂತಿಕೆಯ



ಧಾನ್ಯದ ತೆರದಲಿ ವ್ಯಾಪಾರ ವ್ಯವಹಾರ,
ಚಿನ್ನ  ಬೆಳ್ಳಿ  ಮುತ್ತು  ರತ್ನಗಳ
ಸೇರಲಿ ಮಾರಿದ ರಾಜ್ಯ ಭಾರ
ಕೃಷ್ಣದೇವರಾಯ ಅಜರಾಮರ

ಚರಿತ್ರೆಯ ಪುಟಗಳಲ್ಲಿ ಸೇರಿದ
ಸಮೃದ್ಧಿಯ ನಗರವು ವರ್ಷಗಳೆಷ್ಟೇ
ಕಳೆದರೂ ಕುಗ್ಗದು ವಿಜಯ
ನಗರದ ವಿಜಯಾಭ್ಯುದಯವು

ಹಕ್ಕ  ಬುಕ್ಕರ  ಅಜೇಯ  ನಾಡು
 ವಿದ್ಯಾರಣ್ಯರು ತಪಗೈದಸುಂದರ
ನೆಲೆವೀಡು, ವಿರೂಪಾಕ್ಷ ದೇವರು
ನೆಲೆಸಿಹ ವೀರಪಂಪ ನಾಡು

—————————–

ಮಾಲಾ ಚಲುವನಹಳ್ಳಿ

Leave a Reply

Back To Top