ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ
ಹೆಣೆದ ಗೂಡು
ಎಷ್ಟು ಸುಂದರ ಹೆಣೆದ ಗೂಡು
ಬಂದು ಸೇರಿದೆ ಮನೆಯ ಮಾಡು
ನೀನು ಹಚ್ಚಿದ ತಾಯ ಬೇರು
ಹಬ್ಬಿ ಬೆಳೆದಿದೆ ತವರ ಕೀರು
ಹಾಡ ಬಂದೆ ರೆಕ್ಕೆ ಬಿಚ್ಚಿ
ಕೇಳದಾಯಿತು ಪುಕ್ಕ ಮೆಚ್ಚಿ
ಹಾಡು ಶಬ್ದ ಮರೆತ ಕವನ
ನಿತ್ಯ ನಿನಗೆ ಮಂಗಳ ದವನ
ಹಾಡುತ್ತಿರುವೆ ದ್ವನಿಯು ಇಲ್ಲದೇ
ಕೇಳಬೇಕು ಕರೆದು ಸುಮ್ಮನೆ
ಬಳಲಿ ಬಂದ ಮರಿ ಪಕ್ಕಿಯು
ರೆಕ್ಕೆ ಬಲಿಯದ ಸಣ್ಣ ಪಕ್ಷಿಯು
ಫಕ್ಷ ತೊರೆದು ಅಪ್ಪು ನನ್ನನು
ತಾಯ ಒಡಲು ದ್ವನಿವು ನಿನ್ನದು
ಹೋಗಲಾರೆ ನೆರಳ ಬಯಸಿ
ಇಲ್ಲೇ ಇರುವೆ ಆಸೆ ಮರೆಯಿಸಿ
——————————–
ಡಾ ಸಾವಿತ್ರಿ ಕಮಲಾಪೂರ