ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ ಕವಿತೆ-
ಸಮೃದ್ಧಿಯೋ ಸಂಕಟವೋ!!
ಹೀಗೊಂದು ವೈಭವದ ವಿವಾಹ
ಆದರದ ಆಮಂತ್ರಣ ಸಡಗರದ ಸಂಭ್ರಮಾತಿಥ್ಯ
ಸೃಷ್ಟಿಸಿ ಭ್ರಮಾಲೋಕ
ಅಬ್ಬಬ್ಬ ಅದೇನು
ಡಿಸ್ನೀ ಲೋಕ!
ಬೃಹತ್ ಚಿತ್ರ ವಿಚಿತ್ರ ನಡೆದಾಡುವ ಆಕೃತಿಗಳ ಸಾಕಾರ
ಅಲ್ಲೊಬ್ಬ ಸುಂದರಿ
ಎತ್ತರ ಪೀಠದಿ ನಿಂತ ಪರಿ!
ಥೇಟ್ ಸಮುದ್ರದಿಂದೆದ್ದ
ಮತ್ಯ ಕನ್ಯೆ-
ಸುಕೋಮಲೆ!
ಮೂರ್ನಾಲ್ಕು ತಾಸುಗಳಿಂದ
ನಿಂತ ಮಗಳಿಗೆ ಮೈಯೆಲ್ಲಾ ಬೆವರು
ಬಿಡುತ್ತ ಬಿಸಿಯುಸಿರು
ಬಂದಿರ ಬೇಕು ಆಕೆಯ
ಮನಸ್ಸಲ್ಲಿ ನಿಟ್ಟುಸಿರು!
ಯಾರ ಅಕ್ಕ ತಂಗಿಯೋ
ಏನು ತತ್ವಾರವೋ ಆಕೆಗೆ
ನಿಂತಿಹಳು ಕಲ್ಲಿನಂತೆ
ಮುಖದಲ್ಲಿ ತೋರುತ್ತ ನಗೆ
ಬಂದಿದ್ದ ಅತಿಥಿಗಳ ಜತೆ
ಹಲ್ಲು ಬೀರುತ್ತ
ಮುಂದಿದ್ದ ಮಕ್ಕಳಿಗೆ
ಬಾಗುತ್ತ ಬಿಲ್ಲಿನಂತೆ ಸಂತೈಸುತ್ತ
ಮಖಮಲ್ಲಿನಂತಹ ಸುಕೋಮಲೆ
ಮನದಲ್ಲೆ ತನ್ನ ಸ್ಥಿತಿಗೆ ತಾನೇ
ಮರುಗುತ್ತ ಆದರೂ ಬಳುಕುತ್ತ
ಕಂಡಳು ಬಾಲೆ
ಇಂದಿನ ನಮ್ಮ ಸ್ಥಿತಿ-
ದುಃಸ್ಥಿತಿ
ಮುಂದೆ
ಹೆಜ್ಜೆಯಿಟ್ಟಲ್ಲೆಲ್ಲಾ ಶುಚಿ ರುಚಿಯಾದ ಜಿಹ್ವಾಹ್ಲಾದಕಗಳ
ಘಮ!
ಜನ ಜಂಗುಳಿಯಲ್ಲಿ ಏಕೋ
ತಪ್ಪಿತಸ್ಥ ಮನೋಭಾವ
ತಿಂದಿದ್ದು ತಪ್ಪಾಯಿತು ಎನ್ನುವ
ಪಾಪ ಪ್ರಜ್ಞೆ!
ಹೊಳೆದ ಭಾವನೆಗಳ
ಹೊರ ಹಾಕುವ ಮನಸ್ಸಿಲ್ಲ
ಧೈರ್ಯ ಮೊದಲೇ ಇಲ್ಲ
ಮೌನಂ ಸಮ್ಮತಿ ಲಕ್ಷಣಂ
ಅಲ್ವೇ!!
ವ್ಯವಸ್ಥೆಯ ದರ್ಪಣ
ಏನಂತೀರ?
ಡಾ ಡೋ.ನಾ.ವೆಂಕಟೇಶ
Nice
Thanq
ಸಮೃದ್ಧಿ ಮತ್ತು ಸಂಕಟದ ಬಗ್ಗೆ ಆಸಕ್ತಿದಾಯಕ ಕವಿತೆ. . ಮದುವೆಗಳಲ್ಲಿ ಈಗಿನ ಪ್ರವೃತ್ತಿಗಳನ್ನು ತೋರಿಸಲು ನೀವು ಉತ್ತಮ ಪ್ರಯತ್ನ ಮಾಡಿದ್ದೀರಿ. ತುಂಬಾ ಚೆನ್ನಾಗಿದೆ.
ಸಮೃದ್ಧಿ ಮತ್ತು ಸಂಕಟದ ಬಗ್ಗೆ ಆಸಕ್ತಿದಾಯಕ ಕವಿತೆ. . ಮದುವೆಗಳಲ್ಲಿ ಈಗಿನ ಪ್ರವೃತ್ತಿಗಳನ್ನು ತೋರಿಸಲು ನೀವು ಉತ್ತಮ ಪ್ರಯತ್ನ ಮಾಡಿದ್ದೀರಿ. ತುಂಬಾ ಚೆನ್ನಾಗಿದೆ.
ಇಂದಿನ ವೈಭವದ ವಿವಾಹಗಳ trend.ಕೆಲವರಿಗೆ ಒಂದು ಸ್ಟೇಟಸ್
“ಉಳ್ಳವರು ಶಿವಾಲಯ ಮಾಡಿಹರು. ನಾನೇನು ಮಾಡಲಯ್ಯ ಬಡವ”
ಧನ್ಯವಾದಗಳು!
ಇದನ್ನು ಕಣ್ಣಾರೆ ನೋಡದವರಿಗೆ ಇದೇನಪ್ಪಾ ಈ ವಿಷಯ ಎಂದಾಗ ಬಹುದು. ಉದ್ದುದ್ದ ಕಾಲುಗಳ ಸ್ಲಿಟ್ ಮೇಲೆ, ಕೃತಕ ನಗು ಬೀರುತ್ತಾ, ಬಂದವರನ್ನು ಆಕರ್ಷಿಸಲು ಆಕೆ ಮಾಡುವ ಹಾವ ಭಾವದ ಹಿಂದೆ ಆಕೆಯ ಹೊಟ್ಟೆ ಪಾಡಿಗಾಗಿ ಇದೂ ಎಂದು ತಿಳಿದಾಗ ನನ್ನ ಹಸಿವು ಕೂಡಾ ಮಾಯವಾಗಿತ್ತು.. ಶೋಷಿತರ ಪರ ನಿಮ್ಮ ಈ ಕವನ ಮನ ಕಲಕಿತು.
ಹೌದು.ಮನ ಕಲಕುತ್ತೆ. ಮನದಲ್ಲಿ ಬಂದಿದ್ದನ್ನ ಹೇಳುವ ಹಾಗಿಲ್ಲ. ಆ ಮಗುವಿಗೆ ಏನು ಆರ್ಥಿಕ ಸಮಸ್ಯೆಯೋ!!
ಸೂರ್ಯ, ಧನ್ಯವಾದ!
ಸೂರ್ಯ ಕುಮಾರ್ ಮಡಿಕೇರಿ