ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು ಕವಿತೆ
ಚಿನ್ನ – ಬಂಗಾರ
ಮೌನದಿ ಮನವ ಸೆಳೆದ ಚತುರ
ಸರಳ ಕೋಮಲ ಸರದಾರ
ಸೌಮ್ಯ ಮಧುರ ಮಾತುಗಾರ
ನನಗೆ ನಿನ್ನ ಕಾಣುವ ಕಾತರ
ನಿನ್ನ ಮುಗ್ಧ ಪ್ರೀತಿಯ
ಒಂದೊಮ್ಮೆ ಸೇರುವ ಆತುರ
ನಿನಗೆ ನನ್ನ ಕಂಡಾಗ ಚಡಪಡಿಕೆ
ಆಲಿಂಗನದ ಬಿಸಿಯ
ಅಧರಗಳ ಮಧು ಹೀರುವ ಬಯಕೆ
ನಾ ನಿನ್ನ ಮುದ್ದು ಚಿನ್ನ
ನೀ ನನ್ನ ಒಲವಿನ ಬಂಗಾರ
ಜೊತೆಯಿದ್ದರೂ ಒಂದನೊಂದು
ಕಾಣದ ಎರಡು ನಯನ
ವಾಸ್ತವದಿ ನಮ್ಮೊಳಗೆ ಪ್ರೇಮಾಂಕುರ
ತೀರುವುದೇ ಮನಗಳ ಕೋರಿಕೆ
ಫಲಿಸುವುದೇ ಪ್ರೇಮದಿ ಕರಗುವ
ಪ್ರಣಯದಿ ಮುಳುಗುವ
ನಮ್ಮಯ ಭಾವನೆಗಳ ಒಡಂಬಡಿಕೆ
ಶಾಲಿನಿ ಕೆಮ್ಮಣ್ಣು
ಯಾರ್ನ್ ಬಗ್ಗೆ, ಎನ್ನುದ್ ಬರೆಥರ್.
Superb Akka….You are a good post